ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ'

Rashmi Kasaragodu
Updated On : 14 Jan 2014, 11:24 am

ಸಾಗರ: ಭಾರತಕ್ಕೆ ಬಂದಿರುವ ಎಲ್ಲಾ ನಿರಾಶ್ರಿತ ಹಿಂದೂಗಳಿಗೆ ತಕ್ಷಣ ಭಾರತದ ನಾಗರಿಕತ್ವ ಮತ್ತು ಪುನರ್ ವಸತಿ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಬೇಸತ್ತು ಜೀವ ಉಳಿಸಿಕೊಳ್ಳಲು ಭಾರತಕ್ಕೆ ಬಂದು ಆಶ್ರಯ ಪಡೆಯುತ್ತಿದ್ದಾರೆ. ಪಾಕಿಸ್ತಾನದಿಂದ ಬರುತ್ತಿರುವ ಹಿಂದೂಗಳ ವೀಸಾದ ಕಾಲಾವಧಿ ಮುಗಿದಿರುವುದರಿಂದ ಸರ್ಕಾರಿ ಆಡಳಿತವು ಅವರನ್ನು ಹೊರದಬ್ಬುವ ಕೆಲಸ ಮಾಡುತ್ತಿದೆ. ಕೆಲವರನ್ನು ಒತ್ತಾಯ ಪೂರ್ವಕವಾಗಿ ವಾಪಾಸ್ ಕಳುಹಿಸುವುದು, ಇನ್ನು ಕೆಲವರನ್ನು ಬಂಧಿಸುತ್ತಿರುವ ಪ್ರಯತ್ನ ನಡೆಯುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಭಾರತ ಸರ್ಕಾರವು ಶರಣಾರ್ಥಿ ಹಿಂದೂ ಬಾಂಧವರನ್ನು ಅಪರಾಧಿಗಳಂತೆ ನೋಡುತ್ತಿರುವುದು ಸರಿಯಲ್ಲ. ಆದ್ದರಿಂದ ಭಾರತ ಸರ್ಕಾರವು ಎಲ್ಲ ಶರಣಾರ್ಥಿ ಹಿಂದೂಗಳಿಗೆ ಭಾರತದ ನಾಗರಿಕತ್ವ ಹಾಗೂ ಪುರ್ನವಸತಿ ಸೌಲಭ್ಯ ನೀಡಬೇಕು. ಯಾವುದೇ ಕಾರಣಕ್ಕೂ ಒತ್ತಾಯ ಪೂರ್ವಕವಾಗಿ ಅವರನ್ನು ಹೊರ ದಬ್ಬಬಾರದು. ನಿರಾಶ್ರಿತರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಉದ್ಯೋಗ ಮತ್ತು ಉಚಿತವಾಗಿ ಮನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ಮುಕುಂದ, ಶಾಂತಾ, ಆಶಾ, ಶೈಲ, ಲಕ್ಷ್ಮೀ, ನ್ಯಾಯವಾದಿ ಕೆ.ವಿ.ಪ್ರವೀಣಕುಮಾರ್, ನಗರಸಭಾ ಸದಸ್ಯ ಅರವಿಂದ್ ಇನ್ನಿತರರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement