ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶೀಘ್ರ ಬೂತ್ ಮಟ್ಟದ ಏಜೆಂಟ್ ನೇಮಕ

Rashmi Kasaragodu
Updated On : 15 Jan 2014, 12:47 pm

ಕ.ಪ್ರ.ವಾರ್ತೆ  ಸೊರಬ  ಜ.14 ಚುನಾವಣಾ ಆಯೋಗದ ನಿರ್ದೇಶನದಂತೆ ತಾಲ್ಲೂಕಿನ 236 ಬೂತ್ಗಳಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟ್ಗಳನ್ನು ನೇಮಿಸಿ ಅವರಿಗೆ ತರಬೇತಿ ಕೊಟ್ಟು, ಚುನಾವಣಾಧಿಕಾರಿಗಳ ಜೊತೆಗೆ ಸಹಕರಿಸುವಂತೆ ತಯಾರು ಮಾಡಲಾಗುವುದು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ದತ್ತಾತ್ರಿ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಮುರಘಾ ಮಠದಲ್ಲಿ ನಡೆದ ಮತದಾರರ ನೋಂದಣಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಬಿಎಲ್ಎ ಪ್ರಮುಖ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೇ.100 ಮತದಾನವಾಗುತ್ತಿಲ್ಲ. ಮತದಾನದ ಪ್ರಮಾಣ ಬಹಳ ಕಡಿಮೆ ಇದೆ.  ಆದರೂ ಹೆಚ್ಚಿನ ಮತ ಪಡೆದವರು ಗೆಲುವು  ಸಾಧಿಸುತ್ತಾರೆ.  ಮತದಾರರ ಪಟ್ಟಿಯನ್ನು ಪಕ್ಕಾ ಮಾಡದೇ ನಿಜವಾದ ಪ್ರಜಾಪ್ರಭುತ್ವದ ನಿರ್ಣಯ ಬರಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಜೆಪಿ ಅಧ್ಯಕ್ಷ ಎಚ್. ಗಂಗಾಧರಪ್ಪ ಮಾತನಾಡಿದರು.
ತಾಲೂಕಿನ ಬಿಎಲ್ಎ-1 ಗಜಾನನರಾವ್, ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಗ್ರಾಹಕ ಎ.ಎಲ್. ಅರವಿಂದ್,  ಜಿಲ್ಲಾ ಬಿಎಲ್ಎ ಪ್ರಮುಖ ಮಾಜಿ ಶಾಸಕ ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ವಾಲೇಮನೆ ಶಿವಕುಮಾರ, ನಾಗರಾಜ ಗೌಡ ಚಿಕ್ಕಾವಲಿ, ಎಂ.ನಾಗಪ್ಪ, ಎಂ.ಕೆ. ಯೋಗೇಶ್ವ್ಕೀಲರು, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಡಿ. ಶಿವಯೋಗಿ, ಶ್ರೀಧರಾಚಾರ್ ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement