ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಉತ್ತಮ ನಡೆನುಡಿಗೆ ಅಧ್ಯಯನ ಸಹಕಾರಿ'

Rashmi Kasaragodu
Updated On : 16 Jan 2014, 11:06 am

ಶಿವಮೊಗ್ಗ,: ನಮ್ಮ ನಡೆ ನುಡಿ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಉತ್ತಮ ಪುಸ್ತಕದ ಓದು, ಒಳ್ಳೆಯ ಉಪನ್ಯಾಸಗಳಿಂದ ಪಡೆಯಲು ಸಾಧ್ಯ ಎಂದು ಬೆಕ್ಕಿನಕಲ್ಮಠದ  ಮಲ್ಲಿಕಾರ್ಜುನ  ಮುರುಘರಾಜೇಂದ್ರ ಶ್ರೀ ತಿಳಿಸಿದ್ದಾರೆ.
ನಗರದ ವಿಜಯನಗರ ಬಡಾವಣೆಯಲ್ಲಿರುವ ಗುತ್ಯಪ್ಪ ಕಾಲೋನಿಯಲ್ಲಿರುವ ನಗರಸಭೆ ಮಾಜಿ ಸದಸ್ಯೆ ಆಶಾ ಚನ್ನಬಸಪ್ಪ ಅವರ ಮನೆಯ ಮುಂದೆ ಸಿದ್ಧಗೊಳಿಸಿದ್ದ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸಾಹಿತ್ಯ ಹುಣ್ಣಿಮೆಯ ಮನೆ-ಮನ ಸಾಹಿತ್ಯದ ನೂರೊಂದನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯ ಪರಂಧಾಮ ರೆಡ್ಡಿ, ಸುನೀತಾ ಅಣ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಬೆಂಗಳೂರಿನಿಂದ ಆಗಮಿಸಿದ್ದ ಜಾನಪದ ಗಾಯಕ ಮತ್ತು ಜಾನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ, ಆತಿಥ್ಯ ನೀಡಿದ್ದ ಚನ್ನಬಸಪ್ಪ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಆಶಾ ಚನ್ನಬಸಪ್ಪ ಸ್ವಾಗತಿಸಿದರು, ಮಮತಾ ನಿರೂಪಿಸಿದರು, ಷಣ್ಮುಖಪ್ಪ ವಂದಿಸಿದರು.
ಗಾಯಕ ಕೆ.ರಾಜ್‌ಕುಮಾರ್ ಮತ್ತು ದಾಕ್ಷಾಯಣಿ ಸಂಗಡಿಗರಿಂದ ಗೀತೋತ್ಸವ ಕಾರ್ಯಕ್ರಮ ನಡೆಯಿತು. ಕವಿ ಎಂ. ನವೀನ್ ಕುಮಾರ್, ಕೌಶಲ್ಯಚಂದ್ರು ಕವನ ವಾಚಿಸಿದರು. ಕೆ. ಮುರಳೀಧರ ರಾವ್ ಚುಟುಕು ವಾಚಿಸಿದರು. ಕಡಬ ಶ್ರೀನಿವಾಸ ಮತ್ತು ತಂಡದವರು ಒಂದೂವರೆ ತಾಸಿಗೂ ಹೆಚ್ಚುಕಾಲ ಜನರನ್ನು ಹಾಸ್ಯದ ಹೊನಲಲ್ಲಿ ತೇಲಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement