ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಮಿಟಿ, ತೀರ್ಮಾನ ನೆಪದಲ್ಲಿ ಸಿಎಂ ಬಂಧಿ: ಬಿಎಸ್‌ವೈ ಟೀಕೆ

Rashmi Kasaragodu
Updated On : 16 Jan 2014, 11:05 am

ಕ.ಪ್ರ.ವಾರ್ತೆ   ಶಿವಮೊಗ್ಗ   ಜ.15
ಕಾಂಗ್ರೆಸ್‌ನಲ್ಲಿ ಕಮಿಟಿ ಮಾಡಿ, ಅಲ್ಲಿ ಸರ್ಕಾರದ ಪ್ರಮುಖ ತೀರ್ಮಾನ ಆಗಬೇಕೆಂದು ಹೇಳಿ ಸಿಎಂ ಅವರನ್ನು ಬಂಧನದಲ್ಲಿ ಇಡಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಮಂತ್ರಿಗಳು ಕಾಣಿಸುತ್ತಿಲ್ಲ. ಹಾಗೆಯೇ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಗೌರವದಿಂದ ತಲೆ ಎತ್ತಿ ಓಡಾಡುವಂತಿಲ್ಲ. ಏಕೆಂದರೆ ಸರ್ಕಾರದಿಂದ ಹಣ ಬಿಡುಗಡೆಯಾಗದೇ, ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರಾದಿಯಾಗಿ ಜೆಡಿಎಸ್, ಬಿಜೆಪಿ ಇತರೆ ಶಾಸಕರೂ ಕ್ಷೇತ್ರಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹಿಂದೆ ಅಭಿವೃದ್ಧಿ ಕೆಲಸಗಳಾಗುತ್ತಿತ್ತು, ಈಗ ಆಗುತ್ತಿಲ್ಲ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಗತಿ ಇಲ್ಲ: ಯಾವುದೇ ಕೆಲಸ ಕಾರ್ಯಗಳೂ ಆರಂಭವಾಗಿಲ್ಲ. ಹಿಂದಿನ ಸರ್ಕಾರದ ಕಾಮಗಾರಿಯೂ ಪ್ರಗತಿಯತ್ತಸಾಗುತ್ತಿಲ್ಲ ಎಂದ ಹೇಳಿದ ಅವರು, ರು. 9 ಸಾವಿರ ಕೋಟಿ ಬಾಕಿ ಇದೆ ನಾನೇನು ಮಾಡಲಿ ಎಂದು ಸಿಎಂ ಹೇಳಿದರೆ, ಅದು ಸಿದ್ದರಾಮಯ್ಯನವರ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.
ಯಾವುದೇ ಸರ್ಕಾರ ಬದಲಾದರೆ, ಹಿಂದಿನ ಸರ್ಕಾರದ ಪೆಂಡಿಂಗ್ ಬಿಲ್ ಪಾವತಿ ಮಾಡಬೇಕಾಗುತ್ತದೆ. ಹೊಸ ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದ ಅವರು, ರಾಜ್ಯ ಸರ್ಕಾರದ ರು. 1.22 ಲಕ್ಷ ಕೋಟಿ ಬಜೆಟ್ ಏನಾಯಿತು, ಏಕೆ ಅಭಿವೃದ್ಧಿಯಾಗುತ್ತಿಲ್ಲ, ಇದು ನನಗೆ ಅರ್ಥವಾಗದ ಸಂಗತಿ. ಇಂತಹ ವಿಚಿತ್ರವಾದ ಸನ್ನಿವೇಶ ಕರ್ನಾಟಕದಲ್ಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement