ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪದಾಧಿಕಾರಿಗಳ ಆಯ್ಕೆ

Rashmi Kasaragodu
Updated On : 16 Jan 2014, 11:07 am

ಶಿವಮೊಗ್ಗ: ಜಿಲ್ಲಾ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ವಕೀಲ ಎಂ. ಯೋಗೀಶ್ ಪೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಬಿ. ಸಿದ್ದಲಿಂಗಸ್ವಾಮಿ, ಹಾಲಾರಾಧ್ಯ, ಬಿ.ಎಚ್. ಚಂದ್ರಶೇಖರ್, ಕಾರ್ಯದರ್ಶಿಯಾಗಿ ಶಿವಾಜಿರಾವ್, ಸಹ ಕಾರ್ಯದರ್ಶಿಯಾಗಿ ಜಗದೀಶ್, ಶಿವಕುಮಾರ್, ಖಜಾಂಚಿಯಾಗಿ ಆರ್. ಮಣಿ, ಸಹ ಖಜಾಂಚಿಯಾಗಿ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿ. ನಾಗರಾಜಪ್ಪ, ಎಸ್. ರುದ್ರಪ್ಪ, ದೇವರಾಜ್, ಸಿ.ಕೆ. ಮೂರ್ತಿ, ಕೆ. ಶೇಖರಪ್ಪ, ರವಿ, ಚಂದ್ರಪ್ಪ, ಚಂದ್ರಶೇಖರನ್, ಬಿ.ಎನ್. ನಾರಾಯಣ, ಬಿ.ಎಚ್. ನಾಗರಾಜ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಜ್ದೂರ್ ಸಂಘ ತಿಳಿಸಿದೆ.
ಇಂದು ಶಾಲಾ ವಾರ್ಷಿಕೋತ್ಸವ
ಶಿವಮೊಗ್ಗ: ಎಸ್‌ಕೆಎನ್ ಶಾಲೆಯ ವಾರ್ಷಿಕೋತ್ಸವ ಜ.16ರಂದು ಸಂಜೆ 4 ಗಂಟೆಗೆ ಕುವೆಂಪು ಮಂದಿರದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ. ನಾರಾಯಣ ಸ್ವಾಮಿಯವರು ವಹಿಸಲಿದ್ದು, ಅನೂಪ್ ಎನ್. ಪಟೇಲ್ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಆಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಾಲೆ ಆಡಳಿತ ಮಂಡಳಿ ತಿಳಿಸಿದೆ.
ವಕೀಲರ ಸಂಘ ಸ್ವಾಗತ
ಶಿವಮೊಗ್ಗ: ಭದ್ರಾವತಿಯ ಹಿರಿಯ ವಕೀಲ ಎ.ಬಿ. ನಂಜಪ್ಪ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ನೀಡಿದ್ದ ಅತ್ಯಾಚಾರ ಹಾಗೂ ಗರ್ಭಪಾತ ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿಯಲ್ಲಿ ಇವರ ಹೆಸರು ಕೈಬಿಟ್ಟಿರುವುದನ್ನು ಭದ್ರಾವತಿ ವಕೀಲರ ಸಂಘ ಸ್ವಾಗತಿಸಿದೆ. ತನಿಖೆ ನಡೆಸಿದ ಪೊಲೀಸರು ನಿಷ್ಪಕ್ಷಪಾತ ವರದಿ ನೀಡಿ ಸದರಿ ಘಟನೆಗೂ ಹಾಗೂ ವಕೀಲರು ಮತ್ತು ಅವರ ಕುಟುಂಬದ ಸದಸ್ಯರಿಗೂ ಯಾವುದೇ ಸಂಬಂಧವಿಲ್ಲವೆಂದು ಸಾಬೀತಾದ್ದರಿಂದ ಈ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ಈ ಘಟನೆಗೆ ಕಾರಣರಾದ ಇಬ್ಬರನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಆದರೆ, ವಿನಾ ಕಾರಣ ವಕೀಲರಾದ ಎ.ಬಿ. ನಂಜಪ್ಪ ಹಾಗೂ ಅವರ ಕುಟುಂಬದ ತೇಜೋವಧೆ ಮಾಡಬೇಕೆಂಬ ದುರುದ್ದೇಶದಿಂದ ಕೆಲವು ವ್ಯಕ್ತಿಗಳು ಅನಾವಶ್ಯಕವಾಗಿ ನಿಜಾಂಶವನ್ನು ಮರೆಮಾಚಿ ಸುಳ್ಳು ವರದಿಯನ್ನು ನೀಡುವ ಹುನ್ನಾರವನ್ನು ಮಾಡಿರುತ್ತಾರೆ. ಈ ಕೃತ್ಯವನ್ನು ಮತ್ತು ಧೋರಣೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಬಿ.ಎಸ್. ಮಹೇಶ್ ಕುಮಾರ್ ಹೇಳಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಸಂಘದ ಸರ್ವ ಸದಸ್ಯರ ಸಭೆಯನ್ನು ಕರೆದು ಇದಕ್ಕೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಮಾನ ಕೈಗೊಂಡಿರುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement