ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರತ್ಯೇಕ ಪ್ರಕರಣ; ನಾಲ್ವರ ಸಾವು

Rashmi Kasaragodu
Updated On : 16 Jan 2014, 11:06 am

ಹೊಸನಗರ: ತಾಲೂಕಿನ ನಗರ ಹೋಬಳಿ ಆಡುಗೋಡಿ ಸಮೀಪದ ಹಿನ್ನೀರಿಗೆ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಮುಂಡಗೋಡು ಬ್ಯಾಟಗೆರೆಯ ಅಡ್ಯಾವಪ್ಪ (48) ಮೃತಪಟ್ಟ ವ್ಯಕ್ತಿ. ಇತ್ತೀಚೆಗೆ ಅಕೇಶಿಯಾ ಕಟಾವಿಗಾಗಿ ಬಂದಿದ್ದ ರಾತ್ರಿವೇಳೆ ಹಿನ್ನೀರು ಪ್ರದೇಶದ ಕಡೆ ಹೋಗಿದ್ದ ಅದ್ಯಾವಪ್ಪ ನಂತರ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಹಿನ್ನೀರಿನಲ್ಲಿ ಶವ ತೇಲಿ ಬಂದಾಗ ಗುರುತು ಪತ್ತೆಯಾಗಿದೆ. ನಗರ ಠಾಣೆ ಪಿಎಸ್‌ಐ ಎಂ.ಆರ್. ತಿಪ್ಪಾರೆಡ್ಡಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ: ವ್ಯಕ್ತಿ ಸಾವು
ಶಿವಮೊಗ್ಗ: ಕಾರು- ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ಮೃತಪಟ್ಟ ಘಟನೆ ರಿಪ್ಪನ್‌ಪೇಟೆ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಹೊಸನಗರ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಹಾಗೂ ಎದುರಿನಿಂದ ಬಂದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಶ್ರೀಧರ್ (35) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಪತ್ನಿ, ಇಬ್ಬರು ಮಕ್ಕಳಿಗೆ ತೀವ್ರ ಗಾಯವಾಗಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಸಾಗರ: ತಾಲೂಕಿನ ಆನಂದಪುರಂ ಸಮೀಪದ ಜೇಡಿಸರ ಗ್ರಾಮದ ವಾಸಿ ಮಂಜುನಾಥ (45) ಎಂಬುವವರು ಮಂಗಳವಾರ ರಾತ್ರಿ ರೈಲಿಗೆ ಸಿಕ್ಕು ಮೃತಪಟ್ಟ ಘಟನೆ ನಡೆದಿದೆ.
ಜೇಡಿಸರ ಗ್ರಾಮದ ನಿವಾಸಿಯಾಗಿದ್ದ ಮಂಜುನಾಥ್ ಕೂಲಿಕೆಲಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಕೆಲಸ ಮುಗಿಸಿ ಜೇಡಿಸರ ಗ್ರಾಮದಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮೈಸೂರು-ತಾಳಗುಪ್ಪ ರೈಲು ಬರುತ್ತಿರುವುದನ್ನು ಗಮನಿಸಿಲಿಲ್ಲ.
ಜೇಡಿಸರ ಸಮೀಪದ ಲೆವೆಲ್ ಕ್ರಾಸ್‌ನಲ್ಲಿ ಮೈಸೂರಿನಿಂದ ತಾಳಗುಪ್ಪಕ್ಕೆ ಹೋಗುತ್ತಿದ್ದ ರೈಲು ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದ್ಯಾರ್ಥಿ ಸಾವು
ಹೊನ್ನಾಳಿ: ತಾಲೂಕಿನ ಗೋವಿನಗೋವಿ ಸಮೀಪದ ಕುಂಕುವಗಡ್ಡೆ ರಾಮೇಶ್ವರ ಕ್ಷೇತ್ರದ ಬಳಿ ಬುಧವಾರ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ಪವನ್ (20) ಮುಳುಗಿ ಮೃತಪಟ್ಟಿದ್ದಾನೆ.  ಹೊನ್ನಾಳಿ ತಾಪಂ ಕಚೇರಿಯ ನೌಕರ ಮಲ್ಲೇಶಪ್ಪ ಎಂಬುವರ ಮಗ ಪವನ್, ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ಬಿಎಸ್ಸಿ ವಿದ್ಯಾರ್ಥಿಯಾಗಿದ್ದ. ಮೂವರು ಸ್ನೇಹಿತರೊಂದಿಗೆ  ಸಂಕ್ರಾಂತಿ ಪ್ರಯುಕ್ತ ಕ್ಷೇತ್ರಕ್ಕೆ ಭೇಟಿನೀಡಿದ್ದರು. ನ್ಯಾಮತಿ ಠಾಣೆಯಲ್ಲಿ ಪ್ರಕರಣವಿದೆ.

ಮೂವರ ಬಂಧನ
ಸಾಗರ: ತಾಲೂಕಿನ ಅದರಂತೆ ಗ್ರಾಮದ ಬಸವರಾಜ ಎಂಬುವವರ ಮನೆಯ ಹಿಂಭಾಗದಲ್ಲಿ ಗುಂಡಾಲಿ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಬಸವರಾಜ್, ಪರಮೇಶ್ವರ ಹಾಗೂ ಮಂಜಪ್ಪ ಬಂಧಿತರಾಗಿದ್ದು, 9870 ನಗದು, ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement