ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಹಕಾರ ಸಂಘದಲ್ಲಿ ಪ್ರಾಮಾಣಿಕತೆ ಮುಖ್ಯ'

Rashmi Kasaragodu
Updated On : 16 Jan 2014, 11:06 am

ಆಯನೂರು: ಸಹಕಾರ ಸಂಘದಲ್ಲಿ ನಂಬಿಕೆ, ವಿಶ್ವಾಸ ಹಾಗೂ ಪ್ರಾಮಾಣಿಕತೆಯಲ್ಲದೇ ಪಾರದರ್ಶಕತೆ ಅತಿ ಮುಖ್ಯ ಎಂದು ಮ್ಯಾಮ್ಕೋಸ್ ನಿರ್ದೇಶಕ, ಯಡಗೆರೆ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ತಿಳಿಸಿದರು.
ಆಯನೂರಿನಲ್ಲಿ ನೂತನವಾಗಿ ಆರಂಭಗೊಂಡ ಸಹ್ಯಾದ್ರಿ ರೈತ ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಸಂಘಟನೆಗೆ ದೊಡ್ಡ ಶಕ್ತಿ ಇದೆ. ಅದು ಸದ್ಭಳಕೆಯಾಗಬೇಕು ಎಂದರು.
ಕರ್ನಾಟಕ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ರವಿ ಹೊಸಳ್ಳಿ ಮಾತನಾಡಿ, ಸ್ವಾಯತ್ತತೆ, ಸ್ವಯಂ ಆಡಳಿತ ಹಾಗೂ ಸ್ವಯಂ ನಿಯಂತ್ರಣದಿಂದ ಕೆಲಸ ನಿರ್ವಹಿಸುವುದು ಸಹಕಾರಿ ಸಂಸ್ಥೆಗಳು ಮಾತ್ರ. ನೂತನ ಸಂಸ್ಥೆ ಕೂಡ ಒಳ್ಳೆಯ ಧ್ಯೇಯ ಇಟ್ಟುಕೊಂಡು ರೈತರಿಗೆ ಸಹಾಯಕವಾಗಿ ಕೆಲಸ ಮಾಡಲಿ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ 75 ಸಹಕಾರಿ ಸಂಘಗಳಿದ್ದು, ಶಿವಮೊಗ್ಗ ಗ್ರಾಮಾಂತರದಲ್ಲಿ ಮೂರು ಕಡೆ ಮತ್ತೂರು, ಹೊಸಹಳ್ಳಿ, ಆಯನೂರಿನಲ್ಲಿ ಮಾತ್ರ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶೈಲಾ ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ಜನತೆಗೆ ಅನಕೂಲವಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಸಂಸ್ಥೆಯನ್ನು ಆರಂಭಿಸಲಾಗಿದೆ. ಒಳ್ಳೆಯ ರೀತಿಯಲ್ಲಿ ನಡೆಯಲು ಎಲ್ಲರ ಸಹಕಾರ ಬೇಕು. ಅಲ್ಲದೇ ಸಂಘದ ಆರಂಭದ 15 ದಿನಗಳ ಒಳಗೆ ಡಿಪಾಸಿಟಟ್ಮಾಡುವ ಜನರಿಗೆ ಶೇ.11 (ಜ5 ವರ್ಷ ಮೇಲ್ಪಟ್ಟು) ಬಡ್ಡಿಯನ್ನು ನೀಡಲಾಗುವುದು ಎಂದು ಘೋಷಿಸಿದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸಂಸ್ಥೆಯನ್ನು ಉದ್ಘಾಟಿಸಿ, ಶುಭ ಕೋರಿದರು. ರೈತರಿಗೆ ಈ ಸಂಸ್ಥೆಯಿಂದ ಅನುಕೂಲವಾಗಲಿ ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದೇವಿಬಾಯಿ ಧರ್ಮನಾಯ್ಕ, ಪಂಚಾಯಿತಿ ಅಧ್ಯಕ್ಷ ಭಾಗ್ಯ ನರಸಿಂಹ, ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ರಾಜನಾಯ್ಕ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement