ವಿವಿಧ ಬಡಾವಣೆಗಳಲ್ಲಿ ಜನಜಾಗೃತಿ ಜಾಥಾ
ಶಿವಮೊಗ್ಗ: ಪೋಲಿಯೊದಂತಹ ಮಾರಕವಾದ ಕಾಯಿಲೆಯಿಂದ ದೇಶದಲ್ಲಿ ಸಾಕಷ್ಟು ಮಕ್ಕಳು ಅಂಗವಿಕಲರಾಗಿ ಸಾಕಷ್ಟು ಸಾವಿಗೀಡಾಗುತ್ತಿದ್ದು, ಇಂತಹ ಕಾಯಿಲೆಯ ವಿರುದ್ಧ ಸರ್ಕಾರ, ಸಂಘ- ಸಂಸ್ಥೆಗಳ ಜತೆಗೆ ರೋಟರಿ ಸಂಸ್ಥೆ ನಿರಂತರವಾಗಿ ಮಿಲಿಯನ್‌ಗಟ್ಟಲೆ ಹಣವನ್ನು ಖರ್ಚು ಮಾಡುತಿದೆ ಎಂದು ಪಲ್ಸ್ ಪೋಲಿಯೊ ಸಮಿತಿ ವಲಯ ಸಂಚಾಲಕ ಡಿ.ಎಸ್ ಅರುಣ್ ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ, ರೋಟರಿ ಪೂರ್ವ ವಿದ್ಯಾಸಂಸ್ಥೆ, ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ, ಇಂಟರ್ಯಾಕ್ಟ್ ಕ್ಲಬ್ ರೋಟರಿ ಪೂರ್ವ ಆಶ್ರಯದಲ್ಲಿ ರಾಜೇಂದ್ರನಗರ, ರವೀಂದ್ರನಗರ ಹಾಗೂ ವಿವಿಧ ಬಡಾವಣೆಗಳಲ್ಲಿ ಹಮ್ಮಿಕೊಳ್ಳಲಾದ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಜಾಥಾದಲ್ಲಿ ಡಾ. ರವಿಕಿರಣ್, ಪೋಲಿಯೊ ಗುಣಲಕ್ಷಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಯಂದಿರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಜಾಥಾದಲ್ಲಿ ರೋಟರಿ ಪೂರ್ವ ವಿದ್ಯಾಸಂಸ್ಥೆಯ ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಪ್ರಸನ್ನಕುಮಾರ್, ಇನ್ನರ್‌ವ್ಹೀಲ್ ಅಧ್ಯಕ್ಷ ಸುಜಯಾ ಪುರುಷೋತ್ತಮ, ಕಾರ್ಯದರ್ಶಿ ಶ್ವೇತಾ , ಸೌಭಾಗ್ಯ ಹಾಗೂ ಶಿಕ್ಷಕರು ಮಕ್ಕಳು ಇದ್ದರು.
ಅಣ್ಣನನ್ನ ಮುಚ್ಚಿದ್ದು ತಮ್ಮನಾ? ಅಂಬಿ ಪ್ರಶ್ನೆಗೆ ಸೂರಿ ಎಸ್ಕೇಪ್
ಏನಪ್ಪ ನೀನು ಎಂಪಿ ಆಗಿ ನಿಮ್ಮ ಅಣ್ಣನ್ನ ಮುಚ್ಚಿ ಹಾಕ್ಬಿಟ್ಟಲ್ಲ..! ಕೆಪಿಸಿಸಿ ಕಚೇರಿಯಲ್ಲಿ ನಿಂತು ವಸತಿ ಸಚಿವ ಅಂಬರೀಶ್ ಅವರು ಈ ಪ್ರಶ್ನೆ ಕೇಳಿದಾಗ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಕಕ್ಕಾಬಿಕ್ಕಿ. ಅಂಬರೀಶ್ ಅವರು ಏಕಾಏಕಿ ಕೇಳಿದ ಪ್ರಶ್ನೆ ಅವರಿಗೆ ಸರಿಯಾಗಿ ಅರ್ಥವೂ ಆಗಲಿಲ್ಲ. ಕೊನೆಗೆ ಅವರು ವಿಧೇಯತೆಯಿಂದ ನಾನೇನು ಮುಚ್ಚಿ ಹಾಕಿಲ್ಲ. ನೀವೇಲ್ಲ ಸೇರಿ ಮುಚ್ಚಿ ಹಾಕಿದಿರಿ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಲು ಪ್ರಯತ್ನಿಸಿದರು. ಆದರೆ ಅಂಬರೀಷ್ ಬಿಡಬೇಕಲ್ಲ. ಮೊದಲೇ ಅವರು ಅನಿಸಿದ್ದನ್ನು ನೇರವಾಗಿ ಹೇಳುವವರು. ಜೊತೆಗೆ ಸುರೇಶ್ ಕಿರಿಯ ಎಂಬ ಸಲುಗೆ ಬೇರೆ. ಹೀಗಾಗಿ ತಮ್ಮ ಮಂಡ್ಯ ಭಾಷೆಯ ಶೈಲಿಯಲ್ಲಿ 'ಎಲ್ಲಿಗ್ಲಾ ಹೊಂಟೆ? ಮೇಖ್ರಿ ಸರ್ಕಲ್‌ನಿಂದ ಏರ್‌ಪೋರ್ಟ್ ವರ್ಗೂ, ಗಾಳಿ ಆಂಜನೇಯ ದೇವಸ್ಥಾನದಿಂದ ಮೈಸೂರ್‌ವರ್ಗೂ ನಿಂದೇ ಫ್ಲೆಕ್ಸು, ಬ್ಯಾನರ್ರು, ಪೋಸ್ಟರ್ರು. ನಿಮ್ಮ ಅಣ್ಣ ಎಲ್ಲೂ ಕಾಣಾಕೇ ಇಲ್ಲ. ಈಗ ಬಂದು ನಾನ್ ಮುಚ್ದೆ ಅಂತಿಯಾ?' ಎಂದಾಗ, ಸಾಕಪ್ಪಾ ಇವ್ರ ಸಹವಾಸ ಎಂದು ಸುರೇಶ್ ಮೆಲ್ಲನೆ ಸ್ಥಳ ಬಿಟ್ಟರಂತೆ!