ಸಂಭ್ರಮದ ಬನಶಂಕರಿ ದೇವಿ ರಥೋತ್ಸವ
ಶಿವಮೊಗ್ಗ: ಇಲ್ಲಿಗೆ ಸಮೀಪದ ನಿದಿಗೆ ಗ್ರಾಮದಲ್ಲಿ ಬನಶಂಕರಿ ದೇವಿಯ ರಥೋತ್ಸವ ಹಾಗೂ ರಂಗನಾಥ ಸ್ವಾಮಿಯ ಪಲ್ಲಕ್ಕಿ ಉತ್ಸವ ನೆರವೇರಿತು.
ಬನಶಂಕರಿ ದೇವಿ ಸೇವಾ ಸಮಿತಿ ಹಾಗೂ ಮಹಿಳಾ ಸೇವಾ ಸಮಿತಿಯವರ ಆಶ್ರಯದಲ್ಲಿ ಬನದ ಹುಣ್ಣಿಮೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ 8 ಗಂಟೆಯಿಂದ ಬನಶಂಕರಿ ದೇವಸ್ಥಾನದಲ್ಲಿ ಅಭಿಷೇಕದೊಂದಿಗೆ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. ಪೂಜೆಯ ನಂತರ ತೇರಿಗೆ ಸಮಿತಿಯ ಅಧ್ಯಕ್ಷ ಎ.ಶಂಕರಪ್ಪನವರಿಂದ ಕಳಸರೋಹಣ ನೆರವೇರಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿದ ರಥೋತ್ಸವದಲ್ಲಿ ಗ್ರಾಮಸ್ಥರು, ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಡೊಳ್ಳು, ವಾದ್ಯಗಳು ಉತ್ಸವಕ್ಕೆ ಮೆರಗು ತಂದಿತು. ರಥೋತ್ಸವದ ಹೂವಿನ ಅಲಂಕಾರ ನಿರ್ವಣೆಯನ್ನು ಬಿದರೆ ಕೆ.ರಮೇಶ್ ನಿರ್ವಹಿಸಿದರು.