21ರಿಂದ ಅಂಡಿಗೆಯಲ್ಲಿ ಜಾತ್ರೆ
ಸೊರಬ: ತಾಲ್ಲೂಕಿನ, ಕಸಬಾ ಹೋಬಳಿಯ ಅಂಡಿಗೆ ಗ್ರಾಮದಲ್ಲಿ ದಿನಾಂಕ ಜ. 21 ಮತ್ತು 22ರಂದು ಅಂಡಿಗೆ ಗ್ರಾಮದಲ್ಲಿ ಶ್ರೀ ಮರಿಯಮ್ಮ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಯ ಅಂಗವಾಗಿ ದಿನಾಂಕ ಜ. 21ರ ಮಂಗಳವಾರ ರಾತ್ರಿ 9-30 ಕ್ಕೆ ಭಾಗವತ ಯಕ್ಷಗಾನ ಮಿತ್ರ ಮಂಡಳಿ, ಅಮಚಿ ಇವರಿಂದ ಚಂದ್ರಹಾಸ ಮತ್ತು ಶ್ರೀ ರೇಣುಕಾದೇವಿ ಮಹಾತ್ಮೆ ಎಂಬ ಎರಡು ಪೌರಾಣಿಕ ಯಕ್ಷಗಾನ ಪ್ರದರ್ಶನ ಹಾಗೂ ಜ. 22ರ ಬುಧವಾರ ರಾತ್ರಿ 10 ಗಂಟೆಗೆ ಸೋನಿ ಮೆಲೋಡಿ ವಾದ್ಯಗೋಷ್ಟಿ ಇದ್ದು ಶ್ರೀ ಆರ್.ಹರೀಶ್ ಭದ್ರಾವತಿ, ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.