ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಣ ಪಾವತಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

Rashmi Kasaragodu
Updated On : 18 Jan 2014, 12:26 pm

ಶಿವಮೊಗ್ಗ: ಎಂಪಿಎಂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಉಸ್ತುವಾರಿ ಸಚಿವ ಕಿಮ್ಮನೆ ರತ್ನಕರ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ 4 ತಿಂಗಳಾದರೂ ಹಣ ನೀಡಿಲ್ಲ. ಪ್ರತೀ ಟನ್ ಕಬ್ಬಿಗೆ 2650 ಸರ್ಕಾರವೇ ಘೋಷಣೆ ಮಾಡಿದ್ದರೂ ಕೂಡ ನಿಗದಿ ಪ್ರಮಾಣದಲ್ಲಿ ಹಣ ಪಾವತಿಸಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ತಾತ್ಕಾಲಿಕವಾಗಿ 1900 ಪ್ರತಿ ಟನ್‌ಗೆ ಘೋಷಿಸಿದ್ದರು. ಹಾಗೆಯೇ ಹೆಚ್ಚುವರಿ 100 ಇಂದಿಗೂ ನೀಡಿಲ್ಲ ಎಂದು ಆರೋಪಿಸಿದರು.
100 ಕೋಟಿ ಪ್ಯಾಕೇಜ್ ನೀಡಿ: ಎಂಪಿಎಂ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾಗಿರುವುದರಿಂದ 100 ಕೋಟಿ ಪ್ಯಾಕೇಜ್ ಅನುದಾನವನ್ನು ನೀಡಬೇಕು. ಈ ಕಾರ್ಖಾನೆಯಲ್ಲಿ 200 ಕೋಟಿ ಆವರ್ತ ನಿಧಿ ಸ್ಥಾಪಿಸಿ ಕಬ್ಬು ಸರಬರಾಜು ಮಾಡಿದ ರೈತರಿಗೆ ತಕ್ಷಣ ಹಣ ಪಾವತಿ ಮಾಡಬೇಕು. ಪ್ರಸ್ತುತ ಕೇಂದ್ರ ಸರ್ಕಾರ 7200 ಕೋಟಿ ಬಡ್ಡಿ ರಹಿತ ಹಣವನ್ನು ಬಿಡುಗಡೆ ಮಾಡಿದ್ದು, ಆ ಮಾದರಿಯಲ್ಲಿ ರೈತರಿಗೆ ಬಡ್ಡಿ ರಹಿತ ಸಾಲವನ್ನು ಕಬ್ಬಿನ ಬೆಳೆಗಾರರಿಗೆ ನೀಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
3000ಕ್ಕೆ ದರ ಏರಿಸಿ: 2011-12ರಲ್ಲಿ ಕಬ್ಬಿನ ತಾತ್ಕಾಲಿಕ ದರ 2 ಸಾವಿರ ಎಂದು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರು ಆದೇಶಿಸಿದ್ದರು. ಆದರೆ, ಸಂಘ 2500 ಮಾಡುವಂತೆ ಒತ್ತಾಯಿಸಿದ್ದರೂ ಕೂಡ ಅದನ್ನು ಮಾಡಿಲ್ಲ. 2012-13 ಸಾಲಿನಲ್ಲಿ 2400 ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಸಂಘ 3 ಸಾವಿರ ನೀಡಬೇಕೆಂದು ಒತ್ತಾಯಿಸಿದ್ದರೂ ಕೂಡ ಬೆಲೆ ಹೆಚ್ಚಳ ಮಾಡಿಲ್ಲ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಜಿಲ್ಲಾಧ್ಯಕ್ಷ ಕೆ. ಈರಣ್ಣ, ಉಪಾಧ್ಯಕ್ಷ ರಮೇಶ್, ಮುಖಂಡ ಕೆ.ಟಿ. ಗಂಗಾಧರ್, ರುದ್ರಪ್ಪ, ಕೃಷ್ಣೇಗೌಡ, ಶಿವಾಜಿರಾವ್ ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement