ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

51ನೇ ಕೇಂದ್ರ ಉದ್ಘಾಟನೆ

Rashmi Kasaragodu
Updated On : 19 Jan 2014, 11:34 am

ಕ.ಪ್ರ.ವಾರ್ತೆ, ಸೊರಬ, ಜ.18 ದೇಶದ ಜನಸಾಮನ್ಯರಿಗೆ ಆರ್ಥಿಕ ಶಿಕ್ಷಣ ನೀಡಿ, ಅವರಲ್ಲಿ ಹಣಕಾಸು ನಿರ್ವಹಣೆಯ ಕೌಶಲ್ಯ ಹೆಚ್ಚಿಸಲು ಶ್ರಮಿಸುತ್ತಿರುವ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಟ್ರಸ್ಟ್ನ 51ನೇ ಕೇಂದ್ರವನ್ನು  ಕವರಟ್ಟಿ (ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ) ದಲ್ಲಿ ಸ್ಥಾಪಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಪೈ ತಿಳಿಸಿದ್ದಾರೆ.
ಆರ್ಥಿಕ ಸಾಕ್ಷರತೆ: ಜನರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದು ಟ್ರಸ್ಟ್ನ ಮೂಲ ಉದ್ದೇಶವಾಗಿದ್ದು, ಈ ಕೇಂದ್ರಗಳು ವಿವಿಧ ಆರ್ಥಿಕ ಉತ್ಪನ್ನ ಮತ್ತು ಸೇವೆಗಳ ಬಗೆಗಿನ ಮಾಹಿತಿಯನ್ನು ಆರ್ಥಿಕ ಸೌಲಭ್ಯಗಳಿಗೆ ಒಳಗೊಳ್ಳದವರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಗ್ರಾಮೀಣ ಮತ್ತು ನಗರವಾಸಿ ಬಡವರು, ರಕ್ಷಣಾ ಕಾರ್ಯರ್ಕತರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಮಾಜದ ಎಲ್ಲಾ ಸ್ತರದ ಜನರಿಗೆ ಒದಗಿಸುವ ಗುರಿಯನ್ನು ಇಟ್ಟುಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಈಗಾಗಲೇ ಟ್ರಸ್ಟಿನ 50 ಕೇಂದ್ರಗಳು ಆರಂಭಗೊಂಡಿದ್ದು, ಅವುಗಳಲ್ಲಿ 25 ಕೇಂದ್ರಗಳು ಕರ್ನಾಟಕ, 6 ಕೇಂದ್ರಗಳು ಕೇರಳ, 6 ಕೇಂದ್ರಗಳು ಆಂಧ್ರ ಪ್ರದೇಶ, 8 ಕೇಂದ್ರಗಳು ಉತ್ತರ ಪ್ರದೇಶ, 5 ಕೇಂದ್ರಗಳು ಹರಿಯಾಣ ರಾಜ್ಯಗಳಲ್ಲಿವೆ ಎಂದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement