5ನೇ ವರ್ಷದ ವಾರ್ಷಿಕೋತ್ಸವ
ಶಿವಮೊಗ್ಗ: ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತ ಯೋಚನೆಗಳು ಹೊರಹೊಮ್ಮಲು ಸಾಧ್ಯ, ಎಂದು Ú ಮಕ್ಕಳ ತಜ್ಞ ಡಾ.ಕೊಟ್ಟೂರೇಶ್ವರ ಎಚ್.ವಿ. ಹೇಳಿದರು. ನಗರದ ಪಿಇಎಸ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಕಾಲೇಜಿನ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು, ಬುದ್ಧಿಗೆ ಚಟುವಟಿಕೆ ನೀಡುವಂತೆ ದೇಹಕ್ಕೂ ಚಟುವಟಿಕೆ ನೀಡಿದಾಗ ವಿದ್ಯಾರ್ಥಿಯ ಗುರಿಯೆಡೆಗಿನ ಪಯಣವು ಯಶಸ್ವಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ “AÁæàÞVÚÀÈæÞ ºÛVÚÀ’ ಎಂಬ ಗಾದೆಗೆ ಬದ್ಧರಾಗಿರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಇ.ಎಸ್. ಟ್ರಸ್ಟ್ನ ಜಂಟಿ ಕಾರ್ಯದರ್ಶಿ ಅರುಣಾದೇವಿ ಎಸ್.ವೈ., ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಮುಖ್ಯ ಅಂಗಗಳು. ಇವೆರಡನ್ನೂ ಸರಿದೂಗಿಸಿಕೊಂಡು ಹೋದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಹೇಳಿದರು.
ಪಿಇಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ. ಹೊಸೂರ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಿಇಎಸ್ ಅಂಗಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ಪೋಷಕರು ಭಾಗವಹಿಸಿದ್ದರು.