ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಜಿತಕುಮಾರ್ ಪುಣ್ಯತಿಥಿ: ಇಂದು ಸಂಜೆ ನೃತ್ಯ ಕಾರ್ಯಕ್ರಮ

Rashmi Kasaragodu
Updated On : 19 Jan 2014, 11:35 am

ಶಿವಮೊಗ್ಗ: ಅಜಿತಕುಮಾರ ಅವರ ಪುಣ್ಯತಿಥಿ ನಿಮಿತ್ತ ಆಚರಿಸುವ ಸೇವಾದಿನದ ಅಂಗವಾಗಿ ಸಹಚೇತನ ನಾಟ್ಯಾಲಯ, ವಿಕಾಸ ಟ್ರಸ್ಟ್ ಆಶ್ರಯದಲ್ಲಿ ಭಾರತೀಯಂ ಎಂಬ ಕಾರ್ಯಕ್ರಮವನ್ನು ಜ. 19ರಂದು ಸಂಜೆ 6 ಗಂಟೆಗೆ ಕರ್ನಾಟಕ ಸಂಘ ಭವನದಲ್ಲಿ ಆಯೋಜಿಸಲಾಗಿದೆ.
ನೃತ್ಯಗುರು ಸಹನಾ ಚೇತನ್ ಅವರ ಪರಿಕಲ್ಪನೆಯಲ್ಲಿ ದೇಶಭಕ್ತಿಗೀತೆಗಳಿಗೆ ಹಿಂದುಳಿದ ಬಡಾವಣೆಯ ಆಯ್ದ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಅಜಿತಶ್ರೀ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.
ಮುಖ್ಯ ಅತಿಥಿಯಾಗಿ ಮಾಧವ ನೆಲೆ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ಉಪಸ್ಥಿತರಿದ್ದು, ವಿಕಾಸ ಟ್ರಸ್ಟ್ನ ಖಜಾಂಚಿ ಎಸ್.ಸಚ್ಚಿದಾನಂದ, ಸಹಚೇತನ ನಾಟ್ಯಾಲಯದ ಅಧ್ಯಕ್ಷ ಎನ್.ಆರ್.ಪ್ರಕಾಶ್, ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್, ನಗರ ಸೇವಾ ಪ್ರಮುಖರಾದ ಎನ್.ಶ್ರೀಧರ್ ಉಪಸ್ಥಿತರಿರುವರು.
ಈ ಹಿಂದೆ ಶಿವಮೊಗ್ಗ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಹಾಲಿ ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಬಿ.ಪಿ. ಮನುಕುಮಾರ್ ಹಾಗೂ ಆನಂದಪ್ಪ ಅವರಿಗೆ ಅಜಿತಶ್ರೀ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ವಿಕಾಸ ಟ್ರಸ್ಟ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement