ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆರ್ಟಿಇ ಫೆ. 8ರವರೆಗೆ ಅವಕಾಶ

Rashmi Kasaragodu
Updated On : 19 Jan 2014, 11:33 am


ಶಿವಮೊಗ್ಗ: ಶಿಕ್ಷಣ ಹಕ್ಕು ಕಾಯ್ದೆ ಅನುಸಾರ ಶೇ. 25ರಷ್ಟು ದಾಖಲಾತಿಗಳನ್ನು ಈಗಾಗಲೇ ಶಾಲೆಗಳು ಪ್ರಕಟಿಸಿವೆ. ಅದರಂತೆ ಶಾಲಾ ದಾಖಲಾತಿ ಕೋರಿ ಪೋಷಕರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜ. 7ರಿಂದ ಫೆ. 8ರವರೆಗೆ ಸಲ್ಲಿಸಬಹುದು ಎಂದು ಜಿಪಂ ಉಪ ಕಾರ್ಯದರ್ಶಿ ಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರ್ಜಿ ನಮೂನೆಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಥವಾ ಸಂಬಂಧಪಟ್ಟ ಅನುದಾನರಹಿತ ಶಾಲೆಗಳಲ್ಲಿ ಉಚಿತವಾಗಿ ಪಡೆಯಬಹುದು. ದಾಖಲಾತಿ ಅನುಮೋದಿಸಿದ ಪಟ್ಟಿಯನ್ನು ಫೆ. 28ರಂದು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಅಂತಿಮಗೊಳಿಸಿ ಶಾಲೆಗಳಿಗೆ ಕಳುಹಿಸಲಿದ್ದಾರೆ. ಅದರಂತೆ ನಿಗದಿತ ಆದಾಯ ಮಿತಿಗೆ ಒಳಪಟ್ಟ ಪೋಷಕರು ವಾರ್ಷಿಕ ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಮಾ. 3ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಆರ್ಟಿಇ ಅಡಿ ಅರ್ಜಿ ಸಲ್ಲಿಕೆ, ಸೀಟು ಹಂಚಿಕೆ ಕುರಿತಂತೆ ದೂರುಗಳಿದ್ದಲ್ಲಿ ಡಿಡಿಪಿಐ- ಮೊ. 9448999351, ಬಿಇಒ- ಮೊ. 9480695342, ನೋಡಲ್ ಆಫೀಸರ್- ಮೊ. 9448188955 ಸಂಪರ್ಕಿಸಬಹುದೆಂದು ಗೋಪಾಲ್ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement