ಪತಿಯ ಕೊಚ್ಚಿಕೊಂದ ಪತ್ನಿ
ಸೊರಬ: ತಾಲೂಕು ಕಾತುವಳ್ಳಿ ಗ್ರಾಮದ ಮಹಿಳೆಯೋರ್ವಳು ತನ್ನ ಗಂಡನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿ ಇದೇ ಗ್ರಾಮದ ಮಂಜಪ್ಪ(40), ಕೊಲೆ ಮಾಡಿದ ಆರೋಪಿ ಮಂಜಪ್ಪ ಅವರ ಪತ್ನಿ ಗೀತಮ್ಮ(37). ಮಧ್ಯ ವ್ಯಸನಿ ಮಂಜಪ್ಪ ಪ್ರತಿ ದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ, ಪತ್ನಿ ಗೀತಮ್ಮಳಿಗೆ ಮಾನಸಿಕ ದೈಹಿಕ ಕಿರುಕುಳ ನೀಡುತ್ತಿದ್ದ, ಶುಕ್ರವಾರ ರಾತ್ರಿಯೂ ಕೊಲೆ ಮಾಡುತ್ತೇನೆಂದು ಕುಡುಗೋಲು ತೋರಿಸಿದ್ದು, ಅದೇ ಕುಡುಗೋಲು ಕಸಿದು ಗಂಡನನ್ನು ಕೊಚ್ಚಿ ಹಾಕಿದ್ದಾಳೆ ಎಂದು ತಿಳಿದು ಬಂದಿದೆ.
ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗೀತಮ್ಮರನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಾಗಿದೆ.