ಮಂಕು ಬೂ(ಮೋ)ದಿ' ಹೊತ್ತಿಗೆ ಬಿಡುಗಡೆ
ಶಿವಮೊಗ್ಗ: ಕೋಮುಸೌಹಾರ್ದ ವೇದಿಕೆ ಹೊರತಂದಿರುವ ಸುರೇಶ್ ಭಟ್ ಬಾಕ್ರ ಬೈಲುಚು ರಚಿಸಿರುವ ಮಂಕು ಬೂ(ಮೋ)ದಿ ಪುಸ್ತಕ ಶನಿವಾರ ನಗರದಲ್ಲಿ ಬಿಡುಗಡೆಗೊಂಡಿತು. ಇಲ್ಲಿನ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಯೋಗೀಶ್ ಮಾಸ್ತರ್, ಬ್ರಾಹ್ಮಣ ಶಾಹಿ ವ್ಯವಸ್ಥೆ ವಿರುದ್ಧ ವಚನ ಚಳವಳಿ ಆರಂಭವಾಯಿತು. ಆದರೆ, ಇದನ್ನು ಅನುಸರಿಸಿದವರು ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಒಂದು ಸಂಪ್ರದಾಯ ಬೆಳೆದುಕೊಂಡಿತು. ಈ ಬೆಳವಣಿಗೆ ಹೆಚ್ಚು ಅಪಾಯಕಾರಿ ಎಂದರು. ವೇದಿಕೆಯ ಕೆ.ಎಲ್.ಅಶೋಕ್ ಮಾತನಾಡಿ, ಡಿಎಸ್ಎಸ್ ಸಂಘಟನೆಯ ಗುರುಮೂರ್ತಿ,ಶ್ರೀಪಾಲ್, ಫಣಿರಾಜ್, ಶಶಿಧರ್ ಇದ್ದರು.
ನ್ಯಾನೋ ಟ್ವಿಸ್ಟ್ ಮಾರುಕಟ್ಟೆಗೆ
ಶಿವಮೊಗ್ಗ: ಟಾಟಾ ಕಂಪನಿಯ ಸುಧಾರಿತ ನ್ಯಾನೋ ಟ್ವಿಸ್ಟ್ 2014 ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಶಿವಮೊಗ್ಗ ಟಾಟಾ ವಾಹನಗಳ ಅಧಿಕೃತ ವಾಹನಗಳ ಮಾರಾಟಗಾರರಾದ ಆದಿಶಕ್ತಿ ಕಾರ್ಸ್ನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟಾಟಾ ಮೋಟರ್ಸ್ನ ಟೆರಿಟರ್ ಮ್ಯಾನೇಜರ್ ಕೃಷ್ಣಕಾಂತ್ ಹಾಗೂ ಆದಿಶಕ್ತಿ ಕಾರ್ಸ್ನ ಜಿಎಂ ಸೇಲ್ಸ್ ವಜೀಬ್ ಉರ್ರೆಹಮಾನ್, ನ್ಯಾನೋ ಸಾಕಷ್ಟುಸುಧಾರಣೆಗೊಂಡು ನ್ಯಾನೋ ಟ್ವಿಸ್ಟ್ ಆಗಿ ಮಾರುಕಟ್ಟೆ ಪರಿಚಯಗೊಂಡಿದೆ ಎಂದು ವಿವರಿಸಿದರು. ಎಲೆಕ್ಟ್ರಿಕ್ ಪವರ್ ಆಧಾರಿತ ಸ್ಟೇರಿಂಗ್, ಇಂಟಿಯರ್ ಅಭಿವೃದ್ಧಿ, ರಿಮೋಟ್ ಕೀ ಆಧಾರಿದ ಪ್ರವೇಶ ವ್ಯವಸ್ಥೆ ಸೇರಿದಂತೆ ವಿವಿಧ 10 ಬಗೆಯ ಕಲರ್ನಲ್ಲಿ ನ್ಯಾನೋ ಮಾರುಕಟ್ಟೆಗೆ ಬಂದಿದೆ ಎಂದರು. ಮೊದಲು ಮಾರುಕಟ್ಟೆಗೆ ಬಂದಿದ್ದ ನ್ಯಾನೋ ಕಾರಿನಲ್ಲಿ ಇದ್ದಂತಹ ವ್ಯವಸ್ಥೆಯಲ್ಲಿ ಕೆಲವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಚಾಲನೆ ಸುಲಭ, ಸುಲಲಿತವಾಗಲಿದೆ. ಹಾಗೆಯೇ ಆಕರ್ಷಕಗೊಳಿಸಲಾಗಿದೆ ಎಂದು ವಿವರಿಸಿದರು.
ಕದಂಬ ಜ್ಯೋತಿಗೆ ಸಂಭ್ರಮದ ಸ್ವಾಗತ
ತ್ಯಾಗರ್ತಿ: ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ಪೂರ್ವ ತಯಾರಿಯಾಗಿ ಹೊರಟಿರುವ ಕದಂಬ ಜ್ಯೋತಿಗೆ ಸಾಗರ ತಾಲೂಕಿನ ಗಡಿಭಾಗವಾದ ಬಿ.ಹೊಸೂರಿನಲ್ಲಿ ಗುರುವಾರ ಸಂಭ್ರಮದ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಕದಂಬಜ್ಯೋತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಆನಂದಪುರಂನ ಉಪತಹಸೀ ಲ್ದಾರ್ ಪುಟ್ಟರಾಜ ಗೌಡ, ಬನವಾಸಿಯ ಕದಂಬರು ಕನ್ನಡ ನಾಡಿನ ಹೆಮ್ಮೆಯ ರಾಜ ಮನೆತನವಾಗಿತ್ತು ಎಂದರು. ಶಿಕಾರಿಪುರದಿಂದ ಆಗಮಿಸಿದ ಈ ಜ್ಯೋತಿ ಸಾಗರ, ಸಿದ್ದಾಪುರ, ಸಿರಸಿ ತಾಲೂಕಿಗಳಲ್ಲಿ ಸಂಚರಿಸಲಿದೆ ಎರ್ದರು. ಆನಂದಪುರ ಹೋಬಳಿ ಕಂದಾಯ ನಿರೀಕ್ಷಕ ನಂದ್ಯಪ್ಪ, ಗೌತಮಪುರ ಗ್ರಾಪಂ ಅಧ್ಯಕ್ಷ ವ್ಯೋಮಕೇಶ ಮತ್ತು ಸದಸ್ಯರು, ಈ ಹೋಬಳಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.