ಮಾಧ್ಯಮ ಶಿಬಿರದ ಉದ್ಘಾಟನೆ
ಶಿವಮೊಗ್ಗ: ಯಾವುದೇ ಒಂದು ಜನಪರ ಚಟುವಟಿಕೆಯ ಅನುಷ್ಠಾನದಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ಬಹುಮುಖ್ಯ. ಇದರೊಂದಿಗೆ ರಾಜಕೀಯ, ಸಾಂಸ್ಕೃತಿಕ ನೆಲೆ ಹೊಂದಿದ್ದಾಗ ವ್ಯಕ್ತಿಯ ಸಮಗ್ರ ಅಭಿವೃದ್ಧಿ ಹಾಗೂ ಯಶಸ್ವಿ ಬದುಕು ನಿರ್ವಹಣೆ ಸಾಧ್ಯವಾಗಲಿದೆ ಎಂದು ಪರಿಸರವಾದಿ ಹಾಗೂ ಖ್ಯಾತ ಕೃಷಿ ಬರಹಗಾರ ಪೂರ್ಣಪ್ರಜ್ಞೆ ಬೇಳೂರು ಹೇಳಿದರು.
ನವಿಲೆಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನವಿಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಸ್ತರಣಾ ಕಾರ್ಯಕರ್ತರಿಗಾಗಿ ಏರ್ಪಡಿಸಲಾಗಿದ್ದ ಯಶೋಗಾಥೆಗಳ ಚಿತ್ರಣ- 2ದಿನಗಳ ಮಾಧ್ಯಮ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ ಮಾತನಾಡಿದರು. ಪ್ರೇರಣೆ: ಕಾರ್ಯಕ್ರಮವನ್ನು ಉದ್ಘಾಟಿಸಿದ ವಾರ್ತಾ ಇಲಾಖೆಯ ಆರ್. ಮಾರುತಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು ನಿರ್ವಹಿಸುವ ಕಾರ್ಯ ಶ್ಲಾಘನೀಯವಾದುದು. ಇಂತಹ ಅನೇಕ ಚಟುವಟಿಕೆಗಳು ಇತರರಿಗೆ ಪ್ರೇರಣೆ ನೀಡುವುದು ಮಾತ್ರವಲ್ಲ, ಸರ್ಕಾರಗಳೂ ಅಳವಡಿಸಿಕೊಂಡು ಜಾರಿಗೆ ತರಬಹುದಾಗಿದೆ ಎಂದರು.