ಸಮಾಜ ಪರಿವರ್ತನೆಗೆ ಯುವ ನಾಯಕತ್ವ ಅಗತ್ಯ
ಹೊಸನಗರ: ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆಯಾಗಲು ಯುವ ನಾಯಕತ್ವ ಅಗತ್ಯ. ಜೆಸಿ ಎಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ನಾಯಕರು ಮತ್ತು ಉದ್ಯಮಿಗಳನ್ನು ತಯಾರು ಮಾಡುತ್ತಿದೆ ಎಂದು ಜೇಸಿ ವಲಯ 14ರ ಪೂರ್ವ ವಲಯಾಧ್ಯಕ್ಷ ಹಾಗೂ ಗ್ರೀನ್ ಬಯೋಟೆಕ್ ಇಂಡಿಯಾ ಲಿ, ವ್ಯವಸ್ಥಾಪಕ ನಿರ್ದೇಶಕ ನವೀನ್ ಲಾಯ್ಡ್ ಹೇಳಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಡೈಮಂಡ್ ಜೆಸೀಸ್ನ ನೂತನ ಅಧ್ಯಕ್ಷ ನಾರಾಯಣ ಎಂ.ಕಾನುಮನೆಯವರಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
ವಿನಾಯಕ ಅರೆಮನೆ ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷರಾದ ರಾಜೇಶ್ ಕೀಳಂಬಿ, ಕರಿಬಸವರಾಜ ಬಾದಾಮಿ, ಪೂರ್ವ ರಾಷ್ಟ್ರೀಯ ನಿದರೇಶಕ ಎಲ್.ಕೆ.ಮುರಳೀಧರ್, ಸಂತೋಷ್ ಎಚ್.ಆರ್, ಪೂರ್ಣೇಶ್, ಗಣಪತಿಭಟ್ ಎಸ್.ಎನ್. ಮತ್ತಿತರರಿದ್ದರು.