ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ
ಸೊರಬ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಸೌಲಭ್ಯದ ಸದ್ಬಳಕೆಯಾಗಿ, ಅದರಿಂದ ಅರ್ಹರಿಗೆ ಅನುಕೂಲವಾದಾಗ ಮಾತ್ರ ಸರ್ಕಾರದ ಉದ್ದೇಶ ಸಫಲವಾಗುತ್ತದೆ ಎಂದು ತಾ.ಪಂ. ಸದಸ್ಯೆ ವಿಶಾಲ ದಯಾನಂದಗೌಡ ನುಡಿದರು.
ತಲ್ಲೂರಿನ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಗ್ರಾಮೀಣ ಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಯುವಜನ ಸಂಘದ ವತಿಯಿಂದ ಶಾಲೆಗೆ ಉಚಿತ ಕಂಪ್ಯೂಟರ್ ನೀಡಿದ ಸಂಘದ ಸಂಸ್ಥಾಪಕ ಕಾರ್ತಿಕ್ ಮಾತನಾದರು. ಶಾಲಾ ಸಮಿತಿ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಹುಚ್ಚಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ದಯಾನಂದಗೌಡ, ಶಿಕ್ಷಣ ಸಂಯೋಜಕ ದಯಾನಂದ ಕಲ್ಲೇರ, ಶಿಕ್ಷಕರ ಸಂಘದ ಪದಾಧಿಕಾರಿ ಪ್ರಕಾಶ ಮಡ್ಲೂರ, ಎಸ್ಡಿಎಂಸಿ ಉಪಾಧ್ಯಕ್ಷೆ ಯಶೋಧಮ್ಮ ಮುತ್ತಪ್ಪ, ಸದಸ್ಯ ಅಣ್ಣಪ್ಪ, ಅಣ್ಣಪ್ಪಸ್ವಾಮಿ, ರವೀಂದ್ರಪ್ಪ, ಪಾಲಾಕ್ಷಪ್ಪ, ಹನುಮಂತಪ್ಪ, ವಿರೂಪಾಕ್ಷಪ್ಪ, ಪದ್ಮ, ವಿನೋದ, ರೇಣುಕಾ, ಶಕುಂತಲಾ ಇತರ ಸದಸ್ಯರು ಹಾಜರಿದ್ದರು.