ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಹಕಾರಿ ಸಂಘಗಳಲ್ಲಿ ಭ್ರಷ್ಟಾಚಾರ: ಆರೋಪ

Rashmi Kasaragodu
Updated On : 19 Jan 2014, 11:35 am

ಸೊರಬ: ಇತ್ತೀಚೆಗೆ ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ನಡೆದ ವಿವಿಧ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ಕುರಿತು ಹಾಗೂ ಆಯ್ಕೆ ರದ್ದತಿಗೆ ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ. ಮಂಜುನಾಥ್ ಆಗ್ರಹಿಸಿದ್ದಾರೆ.
ನಮ್ಮ ರಾಜ್ಯದ ಗ್ರಾಮೀಣ ಪ್ರದೇಶದ ಜೀವನಾಡಿಯಾದ ಕೃಷಿ ಕ್ಷೇತ್ರದ ಅಭಿವೃದ್ಧಿಯ ಉದ್ದೇಶವಿರಿಸಿಕೊಂಡು ಸ್ಥಾಪನೆಯಾದ ಸಹಕಾರಿ ಸಂಘಗಳು ಇಂದು ಮೂಲೋದ್ದೇಶ ಮರೆತು ಕ್ಷುಲ್ಲಕ ರಾಜಕೀಯ, ಭ್ರಷ್ಟಾಚಾರದ ತಾಣಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿಭಾವಂತ ಅಭ್ಯರ್ಥಿಗಳು ಅಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಹೋರಾಟ ಮಾಡುತ್ತಾ ಬಂದ ನಮಗೆ ಈ ರೀತಿಯ ಅಕ್ರಮ ಖಂಡಿತ  ಸಹಿಸಲಾಗದ್ದು. ರಾಜ್ಯದಲ್ಲಿ ಕೆ.ಪಿ.ಎಸ್.ಸಿ. ಹಾಗೂ ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ಕುರಿತು ಸಿಒಡಿ ತನಿಖೆಗೆ ದಿಟ್ಟ ಕ್ರಮ ಕೈಗೊಂಡಂತೆ ಈ ಅಕ್ರಮಗಳನ್ನು ಕೂಡಾ ರಾಜ್ಯದ ದಕ್ಷ ತನಿಖಾ ಸಂಸ್ಥೆಗಳಾದ ಸಿ.ಒ.ಡಿ. ಅಥವಾ ಲೋಕಾಯುಕ್ತದಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement