ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಂಬಗಾರು ಪ್ರಕರಣ ಇತ್ಯರ್ಥಕ್ಕೆ ಒತ್ತಾಯ

Mainashree
Updated On : 21 Jan 2014, 10:41 am

ಕ.ಪ್ರ.ವಾರ್ತೆ, ಸಾಗರ, ಜ.20
ನಗರಸಭೆ ವ್ಯಾಪ್ತಿಯ ಜಂಬಗಾರು ಗ್ರಾಮದ ಸರ್ವೆ ನಂ.1 ರಲ್ಲಿನ ಅನಧಿಕೃತ ಅದಿಭೋಗದಾರರನ್ನು ಹೊರಹಾಕುವ ಬಗ್ಗೆ ವಿಚಾರಣೆ ಬಾಕಿ ಇರುವ ಪ್ರಕರಣ ತ್ವರಿತ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ಅಗ್ರಹಾರ ನಿವಾಸಿಗಳು ಮಾಜಿ ಸಚಿವ ಎಚ್.ಹಾಲಪ್ಪ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಎಚ್.ಹಾಲಪ್ಪ ಅವರು, ನಗರಸಭೆ ವ್ಯಾಪ್ತಿಯ ಕೊತ್ವಾಲಕಟ್ಟೆ ಭಾಗದಲ್ಲಿ 180ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಆದರೆ ಈ ಜಾಗ ಜಂಬಗಾರು ಗ್ರಾಮದ ಸರ್ವೆ ನಂ.1ರ ವ್ಯಾಪ್ತಿಗೆ ಸೇರಿಸಿರುವುದರಿಂದ ನಿವಾಸಿಗಳಿಗೆ ಈತನಕ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಜಾಗವು ರಾಮೇಶ್ವರ ದೇವಸ್ಥಾನಕ್ಕೆ ಸೇರಿದ್ದು ಎಂದು ಪ್ರತಿಪಾದಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಹಕ್ಕುಪತ್ರ ನೀಡಿಲ್ಲ:  ಈ ಜಾಗವು ಹಲವು ವರ್ಷಗಳಿಂದ ವಿವಾದಕ್ಕೆ ಈಡಾಗುತ್ತಿದೆ. ಈ ಜಾಗವು ನಕಾಶೆಯಲ್ಲಿ ಸಾಗರ ಪಟ್ಟಣಕ್ಕೆ ಸೇರಿದ ಊರು ಎಂದು ನಮೂದಾಗಿದೆ. ಇದರ ಜೊತೆಗೆ ನಕಾಶೆಯ ಜಾಗದಲ್ಲಿ ಮನೆ, ನಿವೇಶನ ಇರುವ ಕುರಿತು ಸಹ ದಾಖಲೆಗಳಿವೆ. ಆದರೆ, ಈ ಭಾಗದ ಅನೇಕ ನಿವಾಸಿಗಳಿಗೆ ಈತನಕ ತಮ್ಮ ಅದಿಭೋಗಧಾರಿಕೆಗೆ ಸಂಬಂಧಪಟ್ಟಂತೆ ಹಕ್ಕುಪತ್ರ ನೀಡಿಲ್ಲ. ಇದರಿಂದ ಯಾವುದೆ ಸರ್ಕಾರಿ ಸೌಲಭ್ಯ, ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಪ್ರಯೋಜನವಾಗಿಲ್ಲ:  ಕಳೆದ 3 ವರ್ಷದ ಹಿಂದೆ ತಹಸೀಲ್ದಾರ್ ಕಚೇರಿಯಿಂದ ಕೊತ್ವಾಲಕಟ್ಟೆ ಸರ್ವೆ ನಂ. 1ರ 20.32 ಎಕರೆ ಜಾಗ ಮುಜರಾಯಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗ ಎಂದು ನೋಟಿಸ್ ನೀಡಿ, ಈ ಸಂಬಂಧ ಸೂಕ್ತ ದಾಖಲೆ ಸಲ್ಲಿಸುವಂತೆ ಕೇಳಿದ್ದರು. ನಿವಾಸಿಗಳು ಪೂರ್ಣ ದಾಖಲಾತಿ ಒದಗಿಸಿದ್ದಾರೆ. ಅಗ್ರಹಾರ ನಿವಾಸಿಗಳು ಹಿಂದಿನಿಂದಲೂ ಜಾಗಕ್ಕೆ ಸಂಬಂಧಪಟ್ಟ ವಿವಾದವನ್ನು ಬಗೆಹರಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೂಲ ದಾಖಲಾತಿ ಒದಗಿಸಿದರೂ ಈತನಕ ಇಲ್ಲಿ ವಾಸಿಸುವವರಿಗೆ ಜಾಗದ ಮೇಲೆ ಹಕ್ಕು ಬಂದಿಲ್ಲ ಎಂದು ತಿಳಿಸಿದರು.
ಪರಿಶೀಲಿಸಿ:  ಈ ಜಾಗಕ್ಕೆ ಸಂಬಂಧಪಟ್ಟಂತೆ ನಗರಸಭೆಯು ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ ತಪ್ಪು ಮಾಹಿತಿಯೆ ಸಮಸ್ಯೆ ಉಂಟಾಗಲು ಕಾರಣವಾಗಿದೆ. ತಕ್ಷಣ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ನಿವಾಸಿಗಳಿಗೆ ಜಾಗದ ಮೇಲಿನ ಅದಿಭೋಗದಾರಿಕೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಎಂ.ಎಂ. ವಿನಾಯಕ, ಟಿ.ಎಸ್. ರಮಣ, ಗಣಪತಿ ಸುಳಗೋಡು, ಎಸ್.ವಿ. ಹೆಗಡೆ, ಪದ್ಮಿನಿ, ರತ್ನಮ್ಮ, ನಾಗವೇಣಿ, ಟಿ.ಎಂ.ಸುಬ್ರಾವ್, ಜಗದೀಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement