ಸಭೆಯಲ್ಲಿ ನಡೆದ ಘಟನಾವಳಿಗಳು
3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕಣೆ ಆಗಬೇಕಿದ್ದು, 2014- 15ನೇ ಸಾಲಿಗೆ ಖಾಲಿ ನಿವೇಶನ, ವಸತಿ ಉದ್ದೇಶದ ಕಟ್ಟಡ, ವಾಣಿಜ್ಯ ಉದ್ದೇಶದ ಕಟ್ಟಡಗಳ ಮೇಲಿನ ತೆರಿಗೆಯನ್ನು ಶೇ.15 ರಿಂದ 30 ರವರೆಗೆ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸದಸ್ಯ ಪಾಲಾಕ್ಷಿ ಅವರು ನಗರದಲ್ಲಿ ಶುದ್ಧ ನೀರು ಸರಬರಾಜು ಆಗುತ್ತಿಲ್ಲ ಎಂದು ಆಕ್ಷೇಪಿಸಿ ಕೊಳಕು ನೀರನ್ನೇ ಪ್ರದರ್ಶಿಸಿ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಸ್ವಚ್ಛತೆ ಯಾವುದೇ ವಾರ್ಡ್‌ನಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಎಂಜಿನಿಯರ್‌ಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಸದಸ್ಯರು ಪತ್ರಬೇಧ ಮರೆತು ದನಿ ಎತ್ತಿದರು. ನೀರು ನಿರ್ವಹಣೆ ಜವಾಬ್ದಾರಿಯನ್ನು ಸಭೆಯು ಉಪಮಹಾಪೌರರಿಗೆ ವಹಿಸಿತು.