ಜಿಲೆಟಿನ್ ಕಡ್ಡಿ ಪ್ರಕರಣ: 15 ಮಂದಿ ನ್ಯಾಯಾಂಗ ವಶಕ್ಕೆ
ಶಿವಮೊಗ್ಗ: ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಅಣ್ಣಾನಗರದ ಶ್ರೀನಿವಾಸ್ ಎಂಬುವರ ಮನೆಯ ಮುಂದೆ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ತುಂಗಾ ನಗರ ಠಾಣೆಯ ಮುಖ್ಯಪೇದೆ ಇಸ್ಮಾಯಿಲ್ ಸೇರಿದಂತೆ ನಾಲ್ವರನ್ನು 15 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ತುಂಗಾನಗರ ಠಾಣೆಯ ಮುಖ್ಯಪೇದೆ ಇಸ್ಮಾಯಿಲ್, ಖೋವಾ ವ್ಯಾಪಾರಿ ಸುರೇಶ್, ಸ್ಫೋಟಕಗಳನ್ನು ಒದಗಿಸಿದ್ದ ವೀರಪ್ಪ ಹಾಗೂ ಮುನಿಯ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಧೀಶರು ಆರೋಪಿಗಳನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.