ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರಾಧಿಕಾರ ರಚನೆಗೆ ಸಚಿವರ ಒಪ್ಪಿಗೆ

Mainashree
Updated On : 22 Jan 2014, 12:05 pm

ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಅವರು ಪತ್ರವೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ.
ಅಲ್ಲದೆ, ಈ ಭಾಗದ ಶಾಸಕರುಗಳಾದ ಕೆ.ಬಿ. ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ್ ಸೇರಿದಂತೆ ಹಲವರು ಸಮ್ಮತಿ ಸೂಚಿಸಿದ್ದಾರೆ.
ಅಧಿಸೂಚನೆ ಹೊರಡಿಸುವಾಗ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರಾಗಿರಬೇಕು ಎಂಬುದೊಂದು ಅಡಚಣೆ, ಕೇಂದ್ರ ಶಿವಮೊಗ್ಗದಲ್ಲಾಗಬೇಕೋ ಅಥವಾ ಉಡುತಡಿ- ಬಳ್ಳಿಗಾವಿಯಲ್ಲಾಗಬೇಕೋ ಎಂಬ ಚರ್ಚೆ ಬಿಟ್ಟರೆ ಬೇರೆ ಯಾವ ಅಪಸ್ವರವೂ ಇಲ್ಲ. ಈ ಬಗ್ಗೆಯೂ ಸ್ಪಷ್ಟತೆ ಬರಬೇಕಿದೆ. ಇದನ್ನು ಜನಪ್ರತಿನಿಧಿಗಳೇ ಬಗೆಹರಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement