ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

25ರಿಂದ ಭಾರತ ಮಾತಾ ಪೂಜನ್ ಉತ್ಸವ ಪ್ರಾರಂಭ

Mainashree
Updated On : 23 Jan 2014, 12:15 pm

ಶಿವಮೊಗ್ಗ: ಸಂಸ್ಕಾರ ಭಾರತಿಯು ಜ. 25 ಮತ್ತು 26ರಂದು ಭಾರತ ಮಾತಾ ಪೂಜನ್ ಉತ್ಸವ ಹಮ್ಮಿಕೊಂಡಿದೆ.
ಕೋಟೆ ಬಯಲು ರಂಗಮಂದಿರದಲ್ಲಿ ಹಾಗೂ ಕೋಟೆ ಸೀತಾರಾಮಾಂಜನೇಯ ದೇವಾಲಯದ ಅನಂತ ಸಭಾ ಭವನದಲ್ಲಿ ವಿಶಿಷ್ಟವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, 25ರಂದು ಸಂಜೆ 5.30ಕ್ಕೆ ಬದರೀನಾಥ್ ಹಿರೇಮಗಳೂರು ನೇತೃತ್ವದಲ್ಲಿ ಸಾರ್ವಜನಿಕರಿಗಾಗಿ ಕನ್ನಡದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಕನ್ನಡದಲ್ಲಿ ಅರ್ಚನೆ ಏರ್ಪಡಿಸಲಾಗಿದೆ. ಆಸಕ್ತರು ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಭಾ ಕಾರ್ಯಕ್ರಮ: ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಉದ್ಯಮಿ ಶಿವಶಂಕರ್, ವಾಗ್ಮಿ ನಿತ್ಯಾನಂದ ವಿವೇಕ ವಂಶಿಯವರು ಪಾಲ್ಗೊಳ್ಳಲಿದ್ದಾರೆ.
ಸಂಜೆ 7.30ರಿಂದ ಏ ಮೇರೆ ವತನ್ ಕೇ ಲೋಗೋ ಕಾರ್ಯಕ್ರಮ ನೆರವೇರಲಿದ್ದು, ಏ ಮೇರೆ ವತನ್ ಗೀತೆ ರಚನೆಯಾಗಿ 50 ವರ್ಷಗಳು ಪೂರ್ಣೊಗಂಡ ಸಂದರ್ಭದಲ್ಲಿ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗಾಯನ, ನರ್ತನ ಕಾರ್ಯಕ್ರಮ ನಡೆಯುವುದು. ಏ ಮೇರೇ ವತನ್ ಮತ್ತು ವಂದೇ ಮಾತರಂ ಗೀತೆಗಳು ಅಂದು ಶತಕಂಠದಲ್ಲಿ ಮೊಳಗಲಿವೆ.
26ರಂದು ಬೆಳಗ್ಗೆ 10 ಗಂಟೆಗೆ ಅರ್ಚಕರಿಗಾಗಿ ವಿಶೇಷ ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ. ಮೈಸೂರು ಅರಮನೆ ದೇವಾಲಯದ ಅರ್ಚಕ, ಆಗಮಿಕರಾದ ವಿನಯ್ ಹಾಗೂ ಹಿರೇಮಗಳೂರು ಕಣ್ಣನ್ ಗೋಷ್ಠಿ  ನಡೆಸಿಕೊಡಲಿದ್ದಾರೆ.
ಸಮಾರೋಪ: 26ರಂದು ಸಂಜೆ 6 ಗಂಟೆಗೆ ಸಮಾರೋಪ ನಡೆಯಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಉಪಸ್ಥಿತರಿರುವರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ನಂತರ ನಡೆಯುವ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಹರಟೆ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ, ಗುಂಡೂರಾವ್, ತಿರುಮಗನ್ ಭಾಗವಹಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಸಂಸ್ಕಾರ ಭಾರತಿ ಕೋರಿದೆ.
ಮಾಹಿತಿಗೆ ಮೊ. 98444-44820

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement