ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಾಲಿಕೆ ಹೊತ್ತ ಜನರ ತಲೆಗೀಗ ಹೆಲ್ಮೆಟ್

Mainashree
Updated On : 23 Jan 2014, 12:14 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.22 ಶಿವಮೊಗ್ಗ ನಗರಸಭೆ ಮಹಾನಗರಪಾಲಿಕೆಯಾಗಿ ರೂಪುಗೊಂಡ ಹಿನ್ನೆಲೆಯಲ್ಲಿ ಇಲ್ಲಿಯೂ ಸಹ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (ಶಿರಸ್ತ್ರಾಣ) ಬಳಸುವುದು ಕಡ್ಡಾಯವಾಗಲಿದೆ. ಈ ದಿಸೆಯಲ್ಲಿ ಜಿಲ್ಲಾ ಪೊಲೀಸ್ ಇನ್ನೂ ಯೋಚಿಸಿಲ್ಲ. ಆದರೆ ನಾಗರಿಕ ಸಮುದಾಯದ ಜತೆ ಈ ಬಗ್ಗೆ ಚರ್ಚಿಸಲು ಮುಂದಾಗಿದೆ.
ರಾಜ್ಯದಲ್ಲಿ ಹೆಲ್ಮೆಟ್ ಧರಿಸುವುದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ. ಆದರೆ ಕೇರಳದಲ್ಲಂತೂ ಹೆಲ್ಮೆಟ್ ಧರಿಸದೇ ಪ್ರೆಟ್ರೋಲ್ ಬಂಕ್‌ಗಳಿಗೆ ಹೋದರೆ ಅವರಿಗೆ ಪೆಟ್ರೋಲ್ ನೀಡದಿರುವ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಕೆಲವು ದೇಶಗಳಲ್ಲಿ ಸೈಕಲ್ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯ.
ಹೆಲ್ಮೆಟ್ ಬಳಕೆ ಕಡ್ಡಾಯ: ರಾಜ್ಯ ಸರ್ಕಾರವೂ ಸಹ ಸುಪ್ರಿಂಕೋರ್ಟ್ ಆದೇಶದಂತೆ 2005ರಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ರಾಜ್ಯದ ವಿವಿಧೆಡೆಯಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2006ರಲ್ಲಿ ಆದೇಶ ಪರಿಷ್ಕರಿಸಿ ರಾಜ್ಯದ ನಗರಪಾಲಿಕೆಗಳ ವ್ಯಾಪ್ತಿಯಲ್ಲಿರುವ 7 ಜಿಲ್ಲೆಗಳಲ್ಲಿ ಮಾತ್ರ ಹೆಲ್ಮೆಟ್ ಕಡ್ಡಾಯಗೊಳಿಸಿ ಪರಿಷ್ಕರಿಸಿತ್ತು. ಈಗಾಗಲೇ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಗುಲ್ಬರ್ಗ, ಬೆಳಗಾವಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹಾಲಿ ಶಿವಮೊಗ್ಗ, ತುಮಕೂರು ಹಾಗೂ ಬಿಜಾಪುರ ನಗರಸಭೆಗಳು ಪಾಲಿಕೆಯಾಗಿ ಉನ್ನತೀಕರಿಸಿದ ನಂತರ ಸುಪ್ರೀಂಕೋರ್ಟ್, ಕರ್ನಾಟಕ ಮೋಟಾರು ವಾಹನ ಕಾಯ್ದೆ ಹಾಗೂ ಸರ್ಕಾರದ ಆದೇಶದಂತೆ ಇಲ್ಲಿಯೂ ಹೆಲ್ಮೆಟ್ ಕಡ್ಡಾಯಗೊಳಿಸಬೇಕಿದೆ.
ಎಂಥಹ ಹೆಲ್ಮೆಟ್: ಹೆಲ್ಮೆಟ್ ಎಂಬ ಹೆಸರಿನಲ್ಲಿ ಯಾವ್ಯಾವುದೋ ಹೆಲ್ಮೆಟ್‌ಗಳನ್ನು ಸವಾರರು ಧರಿಸುವಂತಿಲ್ಲ. ಬ್ಯೂರೋ ಆಪ್ ಇಂಡಿಯನ್ ಸ್ಟಾಂಡರ್ಸ್, ಸ್ಟಾಂಡರ್ ನಂ. ಬಿಐಎಸ್ 4151/1993 ಮಾಪನ ೊಹಂದಿರುವ  ಹೆಲ್ಮೆಟ್ಟನ್ನೇ ಧರಿಸಬೇಕು.
ಜಿಲ್ಲಾ ಪೊಲೀಸ್ ಇಲಾಖೆಯು ಚರ್ಚೆಗಳ ನಂತರ ಆದೇಶ ಹೊರಡಿಸಲಿದ್ದು, ನಂತರ ಇದೇ ಮಾಪನದ ಹೆಲ್ಮೆಟ್‌ಗಳನ್ನು ವಾಹನ ಸವಾರರು ಖರೀದಿಸಬೇಕು. ಇಲ್ಲವಾದರೆ ರ್ನಾಟಕ ಮೋಟಾರು ವಾಹನ ಕಾಯ್ದೆ ಪ್ರಕಾರ ರು. 100 ವರೆಗೆ ದಂಡ ವಿಧಿಸುವ ಅವಕಾಶವಿದೆ. ಈಗ ಮಲೆನಾಡ ಜಿಲ್ಲಾ ಕೇಂದ್ರದಲ್ಲಿಯೂ ಸಹ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗುವ ಕಾಲ ಹತ್ತಿರ ಬಂದಿದೆ.

 ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement