ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವನಿಗೆ ಎಲ್ಲ ಧರ್ಮದಲ್ಲೂ ಭಕ್ತರು

Mainashree
Updated On : 23 Jan 2014, 12:14 pm

ಕ.ಪ್ರ.ವಾರ್ತೆ, ಶಿಕಾರಿಪುರ, ಜ.22
ಕೇದಾರದಲ್ಲಿ ವೀರಶೈವ ಸಮುದಾಯದ ಸಂಖ್ಯೆಯು ಅತಿ ಕಡಿಮೆ ಇದ್ದರೂ ಪೀಠ ಹೊಂದಿದೆ. ಜಗದೊಡೆಯ ಶಿವನಿಗೆ ಎಲ್ಲಾ ಧರ್ಮದವರು ಭಕ್ತರಿದ್ದಾರೆ ಎಂದು ಕೇದಾರ ಪೀಠದ ಭೀಮಾಶಂಕರಲಿಂಗ ಜಗದ್ಗುರು ಹೇಳಿದರು.
ಪಟ್ಟಣದ ಮಂಗಳ ಭವನದಲ್ಲಿ ಲೋಕಕಲ್ಯಾಣಾರ್ಥ ಶ್ರೀಗಳಿಂದ ಹಮ್ಮಿಕೊಳ್ಳಲಾಗಿರುವ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನಂತರದಲ್ಲಿ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದ ಅವರು, ಕೇದಾರ ಮಠವನ್ನು ಬ್ರಾಹ್ಮಣರು ಬಿಟ್ಟುಕೊಡುವಂತೆ ತಿಳಿಸಿದ್ದರು. ಆಗ ನಾನು ಪ್ರತಿ ಬ್ರಾಹ್ಮಣ ಮಠಗಳಿಗೆ ವೀರಶೈವ ಜಂಗಮರನ್ನು ತೆಗೆದುಕೊಳ್ಳುವಂತೆ ಸವಾಲು ಹಾಕಿದ್ದೆ ಎಂದರು.
ಮಾಜಿ ಸಿಎಂ, ಕ್ಷೇತ್ರದ ಶಾಸಕ ಯಡಿಯೂರಪ್ಪ ಮಾತನಾಡಿ, ಧರ್ಮ ರಕ್ಷಿಸುವ ಕಾರ್ಯ ಇತ್ತೀಚಿನ ದಿನದಲ್ಲಿ ಅವಶ್ಯಕವಾಗಿದೆ. ಪಂಚಪೀಠಗಳಲ್ಲಿ ಸಮಸ್ಯೆ, ನ್ಯೂನತೆ ಗಳಿದ್ದಲ್ಲಿ ಪರಿಹರಿಸಿಕೊಂಡು ಸಮಸ್ತ ವೀರಶೈವರು ಸಂಘಟಿತರಾಗಬೇಕಾಗಿದೆ ಎಂದರು.
 ಸಂಸದ ರಾಘವೇಂದ್ರ ಮಾತನಾಡಿ, ಶರಣರ ಆದರ್ಶವನ್ನು ಭಕ್ತರು ಅನುಸರಿಸಬೇಕು ಎಂದರು. ರಟ್ಟೀಹಳ್ಳಿ ಕಬ್ಬಿಣ ಕಂಥಿಮಠದ ಷ.ಬ್ರ. ಶಿವಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ತಿಪ್ಪಾಯಿಕೊಪ್ಪದ ವಿರೂಪಾಕ್ಷ ಸ್ವಾಮೀಜಿ, ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಚನ್ನಬಸವ ಸ್ವಾಮೀಜಿ, ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯರು, ಜಗಳೂರಿನ ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಶಾಸಕ ಶಾಂತನಗೌಡ, ಸಿದ್ರಾಮಣ್ಣ, ಮಾಜಿ ಶಾಸಕ ಹರತಾಳು ಹಾಲಪ್ಪ, ಸಿಎಂ ಉದಾಸಿ, ಬಿ.ವೈ. ವಿಜಯೇಂದ್ರ, ಸಮಿತಿಯ ಪ್ರಭುಸ್ವಾಮಿ, ರುದ್ರಪ್ಪಯ್ಯ, ಬಸವರಾಜಪ್ಪ, ಗುರುಮೂರ್ತಿ, ಹಾಲಪ್ಪ, ಭೂಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement