ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೃಷಿಕನ ಮೇಲೆ ಸಿಪಿಐ ಹಲ್ಲೆಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

Mainashree
Updated On : 24 Jan 2014, 12:42 pm

ಸಾಗರ: ಆನಂದಪುರಂನ ಕೃಷಿಕ ಎಂ.ಎಸ್. ಕಾಂತರಾಜ್ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಹೊನ್ನಪ್ಪ ಅವರ ಅಮಾನತಿಗೆ ಒತ್ತಾಯಿಸಿ ಗುರುವಾರ ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಜನರ ರಕ್ಷಣೆ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೆ ದೌರ್ಜನ್ಯಕ್ಕೆ ಇಳಿದರೆ ಜನರು ರಕ್ಷಣೆಗೆ ಯಾರ ಬಳಿ ಮೊರೆ ಇಡಬೇಕು ಎಂದು ಪ್ರಶ್ನಿಸಿದರು.
ಜ.22ರಂದು ಕಾಂತರಾಜ್ ಆನಂದಪುರಂನಿಂದ ಸುಳಗೋಡು ಗ್ರಾಮದ ತಮ್ಮ ಮನೆಗೆ ಪಿಕಪ್ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಉಪಠಾಣೆ ಎದುರು ನಿಂತಿದ್ದ ವೃತ್ತ ನಿರೀಕ್ಷಕ ಹೊನ್ನಪ್ಪ ಕರೆದಿದ್ದಾರೆ. ಕಾಂತರಾಜ್ ಇದನ್ನು ಗಮನಿಸಿದೆ ತಮ್ಮ ಮನೆಗೆ ಹೊರಟಿದ್ದಾರೆ. ಕಾಂತರಾಜ್ ಮನೆ ಸಮೀಪ ಪೊಲೀಸ್ ಸಿಬ್ಬಂದಿಯೊಬ್ಬರು ಪಿಕಪ್ ವಾಹನವನ್ನು ನಿಲ್ಲಿಸಿ, ಸಿಪಿಐ ಹೊನ್ನಪ್ಪ ಅವರು ಠಾಣೆಗೆ ಬರುವಂತೆ ಕರೆದಿದ್ದಾರೆ ಎಂದು ತಿಳಿಸಿದ್ದಾನೆ.
ಹಲ್ಲೆ ಖಂಡನೀಯ: ಬಟ್ಟೆ ಬದಲಾಯಿಸಿಕೊಂಡು ಬರುವುದಾಗಿ ಕಾಂತರಾಜ್ ಮನೆಗೆ ಬಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಸಿಪಿಐ ಹೊನ್ನಪ್ಪ ಮತ್ತು ಸಿಬ್ಬಂದಿ ಕಾಂತರಾಜ್ ಅವರ ಮನೆಗೆ ನುಗ್ಗಿ ಲಾಠಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್ ಮಾತನಾಡಿದರು. ಆರ್.ಎಸ್. ಗಿರಿ, ಉಪಾಧ್ಯಕ್ಷ ಬಿ.ಎ. ಇಂದೂಧರ ಗೌಡ, ಎನ್.ಸಿ. ಗಂಗಾಧರ ಗೌಡ, ನಗರಸಭೆ ಸದಸ್ಯ ಶ್ರೀನಿವಾಸ್, ರವಿ ಜಂಬಗಾರು, ಚಂದ್ರಮೌಳಿ, ಹೊಸಮನೆ ಗಣಪತಿ ಗೌಡ, ರವಿಗೌಡ ಹುಣಾಲಮಡಿಕೆ ಇನ್ನಿತರರು ಹಾಜರಿದ್ದರು.
ಡಿವೈಎಸ್‌ಪಿ ಸ್ಪಷ್ಟನೆ: ಅಹವಾಲು ಸ್ವೀಕರಿಸಿ ಮಾತನಾಡಿದ ಡಿವೈಎಸ್‌ಪಿ ಬಿ.ವಿ. ಸುರೇಶ್, ಹಲ್ಲೆ ಪ್ರಕರಣ ಕುರಿತು ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅಮಾಯಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement