ಸಂಭಾಜಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಕನ್ನಡಿಗರು ಮತ್ತು ಮರಾಠಿಗರ ನಡುವೆ ವಿಷ ಬೀಜ ಬಿತುತ್ತಿರುವ ಬೆಳಗಾವಿ ಶಾಸಕ ಸಾಂಬಾಜಿ ಪಾಟೀಲ್ ಅವರನ್ನು ಬಂಧಿಸಿ ಶಾಸಕತ್ವ ರದ್ದುಗೊಳಿಸುವಂತೆ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡಿಗರ ನೆಮ್ಮದಿ ಹಾಳು ಮಾಡುವ ಕೆಲಸದಲ್ಲಿ ತೊಡಗಿರುವ ಸಾಂಬಾಜಿ ಪಾಟೀಲ್, ಈ ಹಿಂದೆ ಕನ್ನಡಿಗರ ಶವ ಯಾತ್ರೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಪದೇ ಪದೇ ರಾಜ್ಯದ ಜನರ ಶಾಂತಿ ಭಾವನೆಗಳಿಗೆ ಧಕ್ಕೆತರುತ್ತಿರುವ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್ಗೌಡ, ನಗರಾಧ್ಯಕ್ಷ ಮಂಜುನಾಥ್, ನಗರ ಕಾರ್ಯದರ್ಶಿ ರಘು, ಮಧು, ರವಿ, ರಾಜು ನಾಯ್ಕ, ಸಂತೋಷ್ ಮತ್ತಿತರರು ಇದ್ದರು.