ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೀವ ರಕ್ಷಣೆಗೆ ಸಂಚಾರಿ ನೀತಿ ಪಾಲಿಸಿ

Vishwanath S
Updated On : 28 Jan 2014, 11:41 am

ಕ.ಪ್ರ.ವಾರ್ತೆ , ಶಿಕಾರಿಪುರ , ಜ.27
ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಪ್ರಕೃತಿ ಸಹಜವಾಗಿ ದೊರೆತ ಜೀವಕ್ಕೆ ಹಾನಿಯಾಗಿ ಪರಾವಲಂಬಿತರಾಗದಂತೆ ಎಚ್ಚರಿಕೆ ವಹಿಸಲು ಪ್ರತಿಯೊಬ್ಬರೂ ಸುರಕ್ಷಿತ ಸಂಚಾರಿ ರಸ್ತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಇಲ್ಲಿನ ಪೊಲೀಸ್ ಉಪ ಅಧೀಕ್ಷಕ ಸೈಯದ್ ಇಸಾಕ್ ತಿಳಿಸಿದರು.
ಸೋಮವಾರ ಪಟ್ಟಣದ ಜುಬೇದಾ ಮಹಿಳಾ ಡಿಎಡ್ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಪೊಲೀಸ್ ಇಲಾಖೆ ವತಿಯಿಂದ ಹಮ್ಮೊಕಳ್ಳಲಾಗಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನಸು ಸಹಜ; ಪ್ರತಿಯೊಬ್ಬರನ್ನು ಸೃಷ್ಟಿಸುವ ಮೂಲಕ ದೇವರು ಉತ್ತಮ ದೇಹದ ಸಹಿತ ಎಲ್ಲಾ ಅಂಗಾಂಗ ಹಾಗೂ ಬುದ್ದಿಶಕ್ತಿಯನ್ನು ನೀಡಿದ್ದಾನೆ ಎಂದ ಅವರು ಮನುಷ್ಯ ನಿತ್ಯ ಕನಸು ಕಾಣುವುದು ಸಹಜ. ಸತತ ಪ್ರಯತ್ನದ ಮೂಲಕ ಕನಸನ್ನು ನನಸಾಗಿಸಬೇಕು. ಅಸಾಧ್ಯವಾದುದನ್ನು ಪಡೆಯಲು ಯತ್ನಿಸಿ ಜೀವಕ್ಕೆ ಹಾನಿಯಾಗದಂತೆ ಎಚ್ಚರಿಕೆ ಅತ್ಯಗತ್ಯ ಎಂದರು.
ಪ್ರಾಸ್ತಾವಿಕವಾಗಿ ಪಟ್ಟಣ ಠಾಣೆ ಪಿಎಸ್ಸೈ ಕಿರಣಕುಮಾರ್ ನಾಯಕ್ ಮಾತನಾಡಿ, ದೇಶದಲ್ಲಿ ಪ್ರತಿಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರ ಸಹಿತ ಅಮಾಯಕ ಪಾದಚಾರಿಗಳು ರಸ್ತೆ ದುರಂತದಲ್ಲಿ ಸಾವನ್ನಪ್ಪುತ್ತಿದ್ದು, ಇದರಿಂದಾಗಿ ದೇಶದ ಆರ್ಥಿಕ ಪ್ರಗತಿಗೆ ಬಹು ದೊಡ್ಡ ಹಿನ್ನಡೆಯಾಗುತ್ತಿದೆ ಎಂದರು. ಸರ್ಕಾರ ರೂಪಿಸಿದ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿದಲ್ಲಿ ಅಪಘಾತ ಪ್ರಮಾಣ ಗಣನೀಯವಾಗಿ ಕಡಿಮೆಗೊಳಿಸಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ, ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಮೌಲಾನಾ ಅಮ್ಜದ್ ಹುಸೇನ್ ವಹಿಸಿದ್ದರು.
ಆಯೇಶಾ, ಅನಿಸಾ, ಸುಮಯಾ ಸೇರಿದಂತೆ ಹಲವು ವಿದ್ಯಾರ್ಥಿನಿಯರು ರಸ್ತೆ ಸುರಕ್ಷತಾ ಕ್ರಮದ ಬಗೆಗಿನ ಅನುಮಾನವನ್ನು ವ್ಯಕ್ತಪಡಿಸಿ ಗೊಂದಲ ಪರಿಹರಿಲೊಕಂಡರು.
ತಾ.ಕಾ. ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ, ಪ್ರಾಚಾರ್ಯ ವೆಂಕಟೇಶ್, ತಿಪ್ಪೇರುದ್ರಸ್ವಾಮಿ, ಪಿಎಸ್ಸೈ ಮೋಹನ್ ಕುಮಾರ್, ಸಿದ್ದಾನಾಯ್ಕ, ಹನೀಫ್ ಸಾಬ್, ಆರೀಫುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಶಿಕಾರಿಪುರದ ಜುಬೇದ ಡಿಎಡ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಮಾಹಿತಿ ಕಾರ್ಯಾಗಾರವನ್ನು ಡಿವೈಎಸ್ಪಿ ಸೈಯದ್ ಇಸಾಕ್ ಉದ್ಘಾಟಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement