ಶಿರಾಳಕೊಪ್ಪ ಪಪಂ ಆಯವ್ಯಯ ಪೂರ್ವಭಾವಿ ಸಭೆ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಜ.27
ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ 2014- 2015ರ ಆಯವ್ಯಯ ಪೂರ್ವಸಿದ್ಧತೆ ಸಭೆ ನಡೆದು ಪಟ್ಟಣದ ಮೂಲಭೂತ ಸೌಕರ್ಯ, ವಿವಿಧ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಮಹತ್ತರ ಪೂರ್ವಭಾವಿ ಸಭೆ ಪಪಂ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಭೆ ನೇತೃತ್ವ ವಹಿಸಿದ್ದ ತಹಸೀಲ್ದಾರ್ ಧರ್ಮೋಜಿರಾವ್ ಸಭೆ ಉದ್ದೇಶಿಸಿ ಮಾತನಾಡಿ, ಪಟ್ಟಣ ಅಭಿವೃದ್ಧಿ ಪಡಿಸಲು ಸಾರ್ವಜನಿಕರ ಅಭಿಪ್ರಾಯ ಮುಖ್ಯ. ಸಾರ್ವಜನಿಕರಿಗೆ ತಮ್ಮ ಪಟ್ಟಣದ ಬಗ್ಗೆ ಹಾಗೂ ಆಗು ಹೋಗುಗಳ ಬಗ್ಗೆ ಮಾಹಿತಿ ಇರುವುದರಿಂದ ಸೂಕ್ತ ಸಲಹೆ ಅವಶ್ಯ ಎಂದರು.
ಪ.ಪಂ. ಮುಖ್ಯಾಧಿಕಾರಿ ರಾಜಕುಮಾರ್ ಮಾತನಾಡಿ, ಪಪಂ ಆಡಳಿತ ನಡೆಸಲು ಆರ್ಥಿಕ ವ್ಯವಸ್ಥೆ ಕ್ರೋಢೀಕರಣ ಮುಖ್ಯವಾಗಿದೆ. ನಂತರ ಕೈಗೊಳ್ಳುವ ಕಾರ್ಯವನ್ನು ಆರ್ಥಿಕ ಕ್ರೋಢೀಕರಣದ ಆಧಾರದಲ್ಲಿ ಕೈಗೊಳ್ಳಲು ಸಾಧ್ಯ. ಮೂಲ ಸೌಕರ್ಯ ಹಾಗೂ ಖರ್ಚು ವೆಚ್ಚದ ಜವಾಬ್ದಾರಿ ಆಡಳಿತ ನಡೆಸುವವರ ಜವಾಬ್ದಾರಿ ಆಗಿರುತ್ತದೆ ಎಂದರು.
ಯುಜಿಡಿ-ಒಳಚರಂಡಿ: ಶಿರಾಳಕೊಪ್ಪ ಪಟ್ಟಣವನ್ನು ಮಾದರಿ ಪಟ್ಟಣ ಮಾಡುವ ದೃಷ್ಟಿಯಿಂದ ಈಗಾಗಲೇ ಹಲವಾರು ಯೋಜನೆಗಳನ್ನು ಮಾಡಲಾಗಿದೆ. ಇನ್ನೂ ಹಲವಾರು ಯೋಜನೆ ಪ್ರಗತಿ ಹಂತದಲ್ಲಿ ಇವೆ. ಹಾಗೆಯೇ ಪಟ್ಟಣದಲ್ಲಿ ಯುಜಿಡಿ ಮತ್ತು ಒಳಚರಂಡಿ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಆ ಬಗ್ಗೆ ಯೋಜನೆಯ ಕಾರ್ಯಪ್ರಗತಿಯಲ್ಲಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ಕೈಗೊಳ್ಳಬೇಕಾದ ಕಾರ್ಯಗಳ ವಿವರ
ಟಿ ಪಟ್ಟಣದಲ್ಲಿ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಬೇಕು.
ಟಿ ನಾಗರಿಕರಿಗೆ ಒದಗಿಸಬೇಕಾದ ಮೂಲ ಸೌಕರ್ಯಗಳಾದ ಕುಡಿವ ನೀರು, ಬೀದಿದೀಪ, ಸ್ವಚ್ಛತಾ ಕ್ರಮ ಕೈಗೊಳ್ಳುವುದು.
ಟಿ ಪಪಂ ವ್ಯಾಪ್ತಿಯಲ್ಲಿ ರಸ್ತೆ ಮೇಲೆ ತಿಂಡಿ ಅಂಗಡಿಗಳು, ಸಂಜೆ ವೇಳೆ ರಸ್ತೆ ಬದಿಯಲ್ಲಿ ಸಿದ್ಧಪಡಿಸುವ ತಿಂಡಿ ಅಂಗಡಿಗಳಿಗೆ ಫುಡ್ಕೋರ್ಟ್ ನಿರ್ಮಿಸಬೇಕು.
ಟಿ ಹೂವು, ಹಣ್ಣು ಮಾರುವವರಿಗೆ ಕಾಯಂ ವ್ಯವಸ್ಥೆ ಮಾಡಬೇಕು