ಸಬಲತೆ ಜತೆಗೆ ಸಾಂಸ್ಕೃತಿಕ ಒಗ್ಗಟ್ಟು ಮೂಡಿಸಿ
ಕ.ಪ್ರ.ವಾರ್ತೆ , ಶಿರಾಳಕೊಪ್ಪ , ಜ. 27
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದರ ಜೊತೆಗೆ ಸಾಂಸ್ಕೃತಿಕ ಒಗ್ಗಟ್ಟು ಮೂಡಿಸಿ, ಶಾಂತರೀತಿಯಿಂದ ಬಾಳುವಂತೆ ಮಾಡಿ ತಮ್ಮ ಕಾಲಮೇಲೆ ನಿಲ್ಲಲು ಸಹಕಾರಿ ಆಗಿದೆ ಎಂದು ತಡಗಣಿ ಗ್ರಾಪಂ ಅಧ್ಯಕ್ಷ ಕೆ. ಮಂಜುನಾಥ ತಿಳಿಸಿದರು.
ಶಿರಾಳಕೊಪ್ಪ ಹತ್ತಿರದ ತಡಗಣಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಧ.ಗ್ರಾ. ಸಂಸ್ಥೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಕೆಲಸ ಕಾರ್ಯ ಕಾಗದದ ಆದೇಶ ಮಾತ್ರ. ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕೃತಿಯಲ್ಲಿ ಇರುತ್ತವೆ ಎಂದರು.
ಸಣ್ಣ ಕಾರ್ಯವಲ್ಲ: ಇಂದು ನಿಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡಿ, ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಗ್ರಾಮದ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿರುವುದು ಸಣ್ಣ ಕಾರ್ಯವಲ್ಲ. ಸರ್ಕಾರ ಹಣ ಚೆಲ್ಲಿದರೂ ಜಾರಿ ಆಗುವದಿಲ್ಲ ಆದರೆ, ಈ ಸಂಸ್ಥೆಯಲ್ಲಿ ಚಾಚೂ ತಪ್ಪದೇ ಕಾರ್ಯರೂಪಕ್ಕೆ ಬರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಿರಿಯ ಕೃಷ್ಣಮೂರ್ತಿ ಮಾತನಾಡಿ, ಹಿಂದೆ ಮಹಿಳೆಯರು ನಮಗೆ ಸ್ವಾತಂತ್ರ್ಯ ಬೇಕು ಎಂದು ಕೇಳುತ್ತಿದ್ದರು. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದೆ ಬರುತ್ತಿದ್ದಾರೆ ಎಂದರು.
ಭಾರತಿ ಮಾತನಾಡಿ ಸ್ವಚ್ಛತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು ಎಂದರು. ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಧೀನೇಶ್ವರಿ ಮಾತನಾಡಿದರು. ಒಕ್ಕೂಟದ ಚಂದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷೆ ಉಷಾ ನಿರೂಪಿಸಿದರು.