ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೆಣ್ಣುಮಕ್ಕಳ ದಿನಾಚರಣೆ ಸಪ್ತಾಹ

Vishwanath S
Updated On : 28 Jan 2014, 11:43 am

ಕ.ಪ್ರ.ವಾರ್ತೆ ,  ಸೊರಬ ,  ಜ. 27
ಇತ್ತೀಚೆಗಿನ ದಿನಗಳಲ್ಲಿ ಪಬ್, ಬಾರ್, ರೇವ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಂಸ್ಕೃತಿಗೆ ಮಸಿ ಬಳಿದವರು ಸುಶಿಕ್ಷಿತರೇ ವಿನಃ ಅವಿದ್ಯಾವಂತರಲ್ಲ ಎಂದು ವಿದ್ಯಾರ್ಥಿನಿ ನಯನಶ್ರೀ ಪ್ರತಿಪಾದಿಸಿದರು.
ಪಟ್ಟಣದ ಗುರುಭವನದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಸಪ್ತಾಹದಲ್ಲಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿನಿ ಸೌಂದರ್ಯ ಕೆ.ಆರ್ ಮಾತನಾಡಿ, ನೈತಿಕ ತಳಹದಿಯ ಶಿಕ್ಷಣ ನೀಡಲು ನಮ್ಮ ಶಿಕ್ಷಣ ಪದ್ಧತಿ ನೀಡುವಲ್ಲಿ ಸೋತಿವೆ. ಈ ನಿಟ್ಟಿನಲ್ಲಿ, ಶಿಕ್ಷಣ ದೊರೆತಾಕ್ಷಣ ದೌರ್ಜನ್ಯ ತಪ್ಪುತ್ತದೆ ಎಂಬುದು ತಪ್ಪು ಅಭಿಪ್ರಾಯ. ಪ್ರಸ್ತುತ ಸಾಮಾಜಿಕ ವಿಘಟನೆಯಲ್ಲಿ ಶಿಕ್ಷಣವಿರುವವರದೇ ಮೇಲುಗೈಯಾಗಿದೆ. ಈ ನಿಟ್ಟಿನಲ್ಲಿ ಇಂದು ಮನೆಯಿಂದಲೇ ಹೆಣ್ಣು ಮಕ್ಕಳಿಗೆ ನೀತಿ, ರೀತಿ, ರಿವಾಜುಗಳನ್ನು ತಿಳಿಸಿ ಬೆಳೆಸುವ ಪ್ರಕ್ರಿಯೆ ಆರಂಭಗೊಳ್ಳಬೇಕು ಎಂದು ವಿಷಯ ಮಂಡಿಸಿದರು.
ವಿಷಯದ   ಪರವಾಗಿ ಮಾತನಾಡಿದ ಸಂದ್ಯಾ ಎಸ್. ಹೆಗಡೆ ಮತ್ತು ಸೌಂದರ್ಯಇ.ಎಂ. ಮೊದಲಾದವರು ಇಂದು ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ಣು ಮಕ್ಕಳಲ್ಲಿ ಶಿಕ್ಷಣ ಇಲ್ಲದವರೇ ಹೆಚ್ಚಾಗಿದ್ದಾರೆ. ಅಕ್ಷರ ಕಲಿತರೆ ಅವಳಿಂದ ದೇಶದ ಉನ್ನತೀಕರಣ ಸಾಧ್ಯವಿದೆ, ಸಮಾಜದ ಏಳಿಗೆ ಸಾಧ್ಯವಿದೆ. ಮಹಿಳೆ ತನ್ನ ಮೇಲಿನ ದೌರ್ಜನ್ಯ, ಅಸಡ್ಡೆ, ನಿಂದನೆ ಹೋಗಲಾಡಿಸಿಕೊಳ್ಳಲು ಶಿಕ್ಷಣವೊಂದೇ ದಾರಿ ಎಂದರು.
ಚರ್ಚಾ ಸ್ಪರ್ಧೆಯಲ್ಲಿ ಸಂಧ್ಯಾ ಎಸ್. ಹೆಗಡೆ ಪ್ರಥಮ, ಸ್ಫೂತಿ ದ್ವಿತೀಯ, ಸೌಂದರ್ಯ ಕೆ.ಆರ್. ತೃತೀಯ ಬಹುಮಾನ ಗಳಿಸಿದರು.
ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಪೋಷಕರು, ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ , ಹೆಣ್ಣು ಮಕ್ಕಳ ರಕ್ಷಣೆಯಲ್ಸಿ ಶಿಕ್ಷಣದ ಪಾತ್ರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಸುಮತಿ ಭಾವೆ, ರಂಜಿತಾ, ರಮ್ಯ ಕ್ರಮವಾಗಿ ಬಹುಮಾನ ಪಡೆದರು.
ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಚಾಲನೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಚ್. ಕೃಷ್ಣ, ಶಿಕ್ಷಣ ಸಂಯೋಜಕ ಜೆ. ಹಾಲೇಶ್ ನಾಯ್ಕ್, ಪಾಲ್ಗೊಂಡಿದ್ದರು. ನಿರ್ಣಾಯಕರಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸದಾನಂದ ಗೌಡ, ಮುಖ್ಯ ಶಿಕ್ಷಕ ಕೃಷ್ಣಾನಂದ, ಸಹ ಶಿಕ್ಷಕ ಶೇಖರ್ ನಾಯ್ಕ್ ಭಾಗವಹಿಸಿದ್ದರು. ತಾಲೂಕು ವಿವಿಧ ಪ್ರೌಢ ಶಾಲೆ ಹೆಣ್ಣು ಮಕ್ಕಳು ಸ್ಪರ್ಧಾ ಕಾರ್ಯಕ್ರಮದಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement