ಭಾರತ-ಭಾರತಿ 50 ಪುಸ್ತಕ ಬಿಡುಗಡೆ
ಶಿವಮೊಗ್ಗ: ಕಳೆದ ನಾಲ್ಕು ದಶಕದಲ್ಲಿ ದಾಖಲೆ ಮಾರಾಟ ಕಂಡ ಮಕ್ಕಳ ಸಾಹಿತ್ಯ ಭಾರತ ಭಾರತಿ ಮತ್ತೆ ಬಂದಿದೆ. ರಾಷ್ಟ್ರೋತ್ಥಾನ ಮಂಗಳವಾರ ಶಿವಮೊಗ್ಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾರತ- ಭಾರತಿ ಸರಣಿಯ ಮೊದಲ ಕಂತಿನ 50 ಪುಸ್ತಕಗಳು ಬಿಡುಗಡೆಗೊಂಡವು. ಈಗಾಗಲೇ ಭಾರತ-ಭಾರತಿ ಸರಣಿಯಲ್ಲಿ 510 ಪುಸ್ತಕಗಳು ಶೇಷಗಿರಿ ರಾವ್ ಅವರ ಸಂಪಾದಕತ್ವದಲ್ಲಿ ಹೊರಬಂದಿದ್ದು, ಇದೀಗ ಚಿರಂಜೀವಿಯವರ ಸಂಪಾದಕತ್ವದಲ್ಲಿ ಒಟ್ಟಾರೆ 200 ಪುಸ್ತಕ ಮಕ್ಕಳ ಕೈ ಸೇರುತ್ತಿದೆ. ಇದರ ಒಂದು ಹಂತವಾಗಿ 50 ಪುಸ್ತಕಗಳು ಲೋಕಾರ್ಪಣೆಗೊಂಡಿತು.