ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳ ಸಾಹಿತ್ಯ ತೃಪ್ತಿಕರವಾಗಿಲ್ಲ: ನಾಡಿ

Vishwanath S
Updated On : 29 Jan 2014, 11:24 am

ಕ.ಪ್ರ.ವಾರ್ತೆ , ಸಾಗರ , ಜ. 28
ಸಾಹಿತ್ಯ ವಿಶಾಲ ದೃಷ್ಟಿಕೋನ, ಬದುಕಿನ ಒಳನೋಟ ನೀಡುತ್ತದೆ ಎಂದು 80ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ 2ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಮಕ್ಕಳ ಸಾಹಿತ್ಯ ತೃಪ್ತಿಕರವಾಗಿಲ್ಲ. ಮ್ಕಳಿಗೆ ಕೊಡುವ ಸಾಹಿತ್ಯ ಶ್ರೀಮಂತವಾಗಿಲ್ಲ ಎಂದು ಹೇಳಿದ ಡಿಸೋಜ, ಮಕ್ಕಳ ಸಾಹಿತ್ಯ ಅವರ ವ್ಯಕ್ತಿತ್ವ ರೂಪಿಸುವಲ್ಲಿ, ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಈ ನಿಟ್ಟಿನಲ್ಲಿ ಕುವೆಂಪು, ಪಂಚೆ ಮಂಗೇಶರಾವ್, ನಾ.ಕಸ್ತೂರಿ, ಜಿ.ಪಿ. ರಾಜರತ್ನಂ ಪರಿಣಾಮಕಾರಿಯಾದ ಮಕ್ಕಳ ಸಾಹಿತ್ಯವನ್ನು ನೀಡಿದ್ದಾರೆ ಎಂದರು.
ಮಕ್ಕಳನ್ನು ಪ್ರೋತ್ಸಾಹಿಸಿ:  ಲೇಖಕನಾದವನು ಹಿರಿಯರ ಬಗ್ಗೆ ಬರೆಯುವಾಗ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಆದರೆ ಮಕ್ಕಳ ಬಗ್ಗೆ ಬರೆಯುವಾಗ ಭಾಷೆ, ಶಬ್ಧ, ವಿಷಯ ಬಳಸುವಲ್ಲಿ ಎಚ್ಚರದಿಂದ ಇರಬೇಕು. ಎಲ್ಲ ಮಕ್ಕಳಲ್ಲಿಯೂ ಸಾಹಿತಿಯಾಗುವ, ಏನಾದರೂ ಸಾಧನೆ ಮಾಡುವ ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement