ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕರ್ನಾಟಕ ಬ್ಯಾಂಕಿನ 562 ನೇ ಶಾಖೆ ಉದ್ಘಾಟನೆ

Lingaraj Badiger
Updated On : 30 Jan 2014, 10:25 am

ಸೊರಬ: ಕರ್ನಾಟಕ ಬ್ಯಾಂಕ್ ಇನ್‌ಫೋಸಿಸ್ ಜೊತೆಗೆ ಒಪ್ಪಂದ ಮಾಡಿಕೊಂಡು ಅವರು ನೀಡಿದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಕೇವಲ ಮಿಸ್ ಕಾಲ್‌ಕೊಟ್ಟರೆ ಸಾಕು ತಮ್ಮ ಖಾತೆಯ ವಿವರ ತಿಳಿಯಬಹುದು ಎಂದು ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಎಮ್.ಎಸ್. ಮಹಾಬಲೇಶ್ವರ ತಿಳಿಸಿದರು.
ಅವರು ಬುಧವಾರ ಪಟ್ಟಣದಲ್ಲಿ ಕರ್ನಾಟಕ ಬ್ಯಾಂಕಿನ 562 ನೇ ಶಾಖೆ ಮತ್ತು ಎಟಿಎಂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಸೇವೆಗೆ ಬದ್ಧ: ಸೌಲಭ್ಯ ತಂತ್ರಜ್ಞಾನದ ಜೊತೆಗೆ ಗ್ರಾಹಕರ ಸೇವೆಗೆ ಕರ್ಣಾಟಕ ಬ್ಯಾಂಕ್ ಬದ್ಧವಾಗಿದೆ. ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಸಹಕಾರದಿಂದ ಕೃಷಿ ಸಾಲವನ್ನು ಕೇವಲ ಶೇ.4 ರ ಬಡ್ಡಿಯಂತೆ ನೀಡಲಾಗುತ್ತಿದೆ.  ಇದಲ್ಲದೇ ವ್ಯಾಪಾರ, ಉದ್ದಿಮೆ, ಕೈಗಾರಿಕೆ, ಹೈನುಗಾರಿಕೆ ಮುಂತಾದವುಗಳಿಗೆ ಆರ್ಥಿಕ  ಸೌಲಭ್ಯ ಒದಗಿಸಲು ನಮ್ಮ ಬ್ಯಾಂಕ್ ಬದ್ಧವಾಗಿದೆ  ಎಂದರು.  
ಬ್ಯಾಂಕ್ ಶಾಖೆ ಮತ್ತು ಎಟಿಎಂ ಉದ್ಘಾಟಿಸಿ, ಆಶೀರ್ವಚನ ನೀಡಿದ ತಾಲೂಕು ಗೊಗ್ಗೆಹಳ್ಳಿ ಮಠದ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಣವನ್ನು ಪ್ರಾಣದಂತೆ ರಕ್ಷಣೆ ಮಾಡಬೇಕು ಎಂದು ಹೇಳಿದರು.
ಇದೇ ಸಮಯದಲ್ಲಿ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳನ್ನು ಮತ್ತು ಕಟ್ಟಡದ ಮಾಲೀಕ ಗಂಗಾಧರ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣದ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement