ಗುಂಡು ತಗುಲಿ ವ್ಯಕ್ತಿ ಸಾವು
ಹೊಸನಗರ: ಗುಂಡು ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ನಗರ ಹೋಬಳಿಯ ಹುಳುಕೊಪ್ಪ ಕಾಡಿನಲ್ಲಿ ನಡೆದಿದೆ. ಹುಳುಕೊಪ್ಪ ನಿವಾಸಿ ಗುಂಡಪ್ಪಗೌಡರ ಮಗ ಲೋಕೇಶ್ (42) ಮೃತ ವ್ಯಕ್ತಿ. ಮೃತರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಘಟನೆ ವಿವರ: ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಶಿಕಾರಿಗೆ ಹೋಗುತ್ತೇನೆ ಎಂದು ಹೇಳಿ ಹೊರಟ ಲೋಕೇಶ್ ರಾತ್ರಿ ಕಳೆದು ಬೆಳಗಾದರೂ ಮನೆಗೆ ವಾಪಸ್ಸಾಗಲಿಲ್ಲ. ಇದರಿಂದ ಅನುಮಾನಗೊಂಡು ಲೋಕೇಶ್ ಗೋಗಿದ್ದ ಕಾಡಿನ್ನು ಹೊಕ್ಕು ಹುಡುಕಾಡಿದ್ದಾರೆ. ನಂತರ ಮರವೊಂದರ ಕೆಳಗೆ ಬಿದ್ದಿದ್ದನ್ನು ಗಮನಿಸಿದಾಗ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಎದೆಭಾಗಕ್ಕೆ ಗುಂಡು ತಗಲಿದ್ದು, ಪಕ್ಕದಲ್ಲೇ ಶಿಕಾರಿಗೆಂದು ತೆಗೆದುಕೊಂಡು ಹೋಗಿದ್ದ ಕೋವಿ ಕೂಡ ಅಲ್ಲೆ ಬಿದ್ದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮರವೊಂದನ್ನು ಹತ್ತಿ ಶಿಕಾರಿ ಮಾಡುವ ಬರದಲ್ಲಿ ಅಚಾತುರ್ಯದಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.