'ಸರ್ಕಾರಿ ಸೌಲಭ್ಯ ತಲುಪಲು ಕಾಳಜಿ ವಹಿಸಿ'
ಹೊಸನಗರ: ಸರ್ಕಾರದ ಯಾವುದೇ ಸೌಲಭ್ಯಗಳು ಜನರಿಗೆ ತಲುಪುವಲ್ಲಿ ಮತ್ತು ಸಮರ್ಪಕ ಅನುಷ್ಠಾನಗೊಂಡಲ್ಲಿ ಮಾತ್ರ ಯೋಜನೆಗಳು ಸಾರ್ಥಕಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಜನರಿಗೆ ಸೌಲಭ್ಯ ತಲುಪಿಸುವ ಕಾಳಜಿ ತೋರಬೇಕಿದೆ ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಹೇಳಿದರು.
ತಾಲೂಕಿನ ಕೊಡೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಿಸಿದ ಅವರು, ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಹಲವು ಯೋಜನೆ ರೂಪಿಸಿದೆ. ಇದನ್ನು ಸದುಪಯೋಗ ಪಡೆದುಕೊಳ್ಳುವ ಕೆಲಸ ಜನರಿಂದ ಆಗಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಕುಲಾಲ್ ವಹಿಸಿದ್ದರು. ತಾಪಂ ಸದಸ್ಯ ಕುನ್ನೂರು ಮಂಜಪ್ಪ, ಗ್ರಾಪಂ ಅಧ್ಯಕ್ಷ ಕೃಷ್ಣ ಬಿ. ಶೆಟ್ಟಿ, ಸದಸ್ಯರಾದ ಕೊಡೂರು ಚಂದ್ರಮೌಳಿ, ಪುಟ್ಟಪ್ಪ, ಗುರುಮೂರ್ತಿ, ಕರಿಗೆರಸು ಜಯಂತ್, ಲೋಹಿತ್, ಗಿರಿಜಮ್ಮ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಮಂಜಪ್ಪ ಸ್ವಾಗತಿಸಿದರು. ಶೇಖರಪ್ಪ ವಂದಿಸಿ, ಲಕ್ಷ್ಮಣ ನಿರೂಪಿಸಿದರು.
ಕಾನುಗೋಡಿನಲ್ಲಿ ಸೈಕಲ್ ವಿತರಣೆ: ತಾಲೂಕಿನ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ ಸೈಕಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಸೈಕಲ್ ಸದುಪಯೋಗ ಪಡೆಯುವಂತೆ ಕೋರಿದರು.
ಗ್ರಾಪಂ ಸದಸ್ಯರಾದ ಕಣಕಿ ಮಹೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗರಾಜ್, ಮುಖ್ಯ ಶಿಕ್ಷಕ ಬಾಲಚಂದ್ರ, ಪ್ರಕಾಶ್ ಜಿ. ಪ್ರಕಾಶ್ ವಾರದ್, ಭವ್ಯ, ಊರಿನ ಪ್ರಮುಖರು, ಗ್ರಾಮಸ್ಥರುಪಾಲ್ಗೊಂಡಿದ್ದರು.