ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸೇವೆ, ನಿಷ್ಠೆ, ಪ್ರಾಮಾಣಿಕತೆ ಮಾದರಿಯಾಗಲಿ'

Vishwanath S
Updated On : 1 Feb 2014, 11:23 am

ಜೋಗ್‌ಫಾಲ್ಸ್: ತಾವು ನಿಗಮದಲ್ಲಿ ಸಲ್ಲಿಸಿದ ಸೇವೆ, ಮಾರ್ಗದರ್ಶನ, ನಿಷ್ಠೆ, ಪ್ರಾಮಾಣಿಕತೆ, ಅದಮ್ಯ ಉತ್ಸಾಹ, ಸ್ಫೂರ್ತಿ ಎಲ್ಲರಿಗೂ ಮಾದರಿಯಾಗಲಿ ಎಂಬುದಾಗಿ ನಿಗಮದ ಕಾಮಗಿರಿ ವಿಭಾಗದ ಮುಖ್ಯ ಅಭಿಯಂತರ ರಾಜಮುಡಿ ತಿಳಿಸಿದರು.
ಅವರು ಕವಿನಿನಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಕಾರ್ಯನಿರ್ವಾಹಕ ಅಭಿಯಂತರ ಕೆ.ಆರ್. ಮಂಜುನಾಥ್ ಅವರಿಗೆ ಲಿಂಗನಮಕ್ಕಿ ಮುಖ್ಯ ಅಭಿಯಂತರ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ, ಅವರ ಸರಳತೆ, ನೇರ ನುಡಿ, ಸಮಯಪಾಲನೆ, ಸೇವಾ ಮನೋಭಾವ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಆತಂಕಕಾರಿ ವಿಷಯ: ಪ್ರಭಾರ ಅಧೀಕ್ಷಕ ಅಭಿಯಂತರ ಎನ್. ಮೋಹನ್ ಮೂರ್ತಿ ಮಾತನಾಡಿ, ನಿಗಮದಲ್ಲಿ ಸಾಕಷ್ಟು ಅನುಭವಸ್ಥ ಉದ್ಯೋಗಿಗಳು ನಿವೃತ್ತಿಯಾಗುತ್ತಲಿದ್ದು, ಅದಕ್ಕೆ ಪರ್ಯಾಯವಾಗಿ ಉದ್ಯೋಗಿಗಳನ್ನು ತುಂಬದ ಕಾರಣ ನಿಮದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಒತ್ತಡ ಹೆಚ್ಚುತ್ತಿದ್ದು, ಇದು ಆತಂಕಕಾರಿ ವಿಷಯವಾಗಿದೆ ಎಂದರು.
ಕಾರ್ಯನಿರ್ವಾಹಕ ಅಭಿಯಂತರ ಬಿ.ಪಿ. ಶಿವಕುಮಾರ್, ನೆಮ್ಮದಿಯ ಜೀವನವನ್ನು ನಾವು ಕಾಣಬೇಕಾದಲ್ಲಿ ವೃತ್ತಿಯ ಜೊತೆ- ಜೊತೆಗೆ ಪ್ರವೃತ್ತಿಯನ್ನು ಬೆಳಸಿಕೊಂಡಲ್ಲಿ ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಾಣಬಹುದಾಗಿದೆ. ಇಂತಹ ಹವ್ಯಾಸವನ್ನು ಶ್ರೀಯುತರು ಬೆಳೆಸಿಕೊಂಡ ಕಾರಣ ಅವರ ಜೀವನ ಯಾವುದೇ ಬೇಸರ ತರಿಸದು ಎಂದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯನಿರ್ನಾಹಕ ಅಭಿಯಂತರ ಕೆ.ಆರ್. ಮಂಜುನಾಥ್ ನಿಗಮಕ್ಕೆ ತಮ್ಮ ಸೇವೆ ಸಲ್ಲಿಸಲು ಸದಾ ಸಿದ್ಧ. ಯಾವುದೇ ರೀತಿಯ ತೊಂದರೆಗಳು ಎದುರಾದಾಗ ಅದನ್ನು ಯಶಸ್ವಿಯಾಗಿ ಎದುರಿಸಲು ಆ ವಿಷಯದಲ್ಲಿ ತಲ್ಲೀನತೆಯಿಂದ ಪಾಲ್ಗೊಂಡಾಗ ಅದನ್ನು ಪರಿಹರಿಸಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement