ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವೈದ್ಯರ ರಕ್ತದಾನ ಸೇವೆ ಮಾದರಿ: ಡಾ.ನಾಗರಾಜ

Mainashree
Updated On : 3 Jul 2014, 9:43 am

ಶಿಕಾರಿಪುರ: ಇಲ್ಲಿನ ಆರೋಗ್ಯ ಕೇಂದ್ರದ ವೈದ್ಯರು ತಮ್ಮ ಕರ್ತವ್ಯದ ಜತೆಗೆ ಇದೀಗ ರಕ್ತದಾನ ಮಾಡುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದು ಇತರೇ ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ನಾಗರಾಜ ನಾಯ್ಕ್ ಹೇಳಿದರು.
ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದಿಂದ ತಾ. ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ವಿಶ್ವ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆಲ್ಲ ವೃತ್ತಿಗಿಂತ ವೈದ್ಯ ವೃತ್ತಿ ಹೆಚ್ಚಿನ ಮಹತ್ವ ಹೊಂದಿದ್ದು, ವೈದ್ಯರು ಕೇವಲ ರೋಗಿಗೆ ರಕ್ತ ನೀಡುವ ಕಾರ್ಯ ನಿಭಾಯಿಸುತ್ತಿದ್ದು ಇದೇ ಪ್ರಥಮ ಬಾರಿಗೆ ತಾಲೂಕಿನ ವೈದ್ಯರು ತಾವು ರಕ್ತದಾನ ಮಾಡುವ ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಪ್ರಶಂಸಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿದರು. ವೈದ್ಯರು, ಇಲಾಖಾ ಸಿಬ್ಬಂದಿ ಜತೆ ಸ್ವಯಂಪ್ರೇರಿತ 114 ಸಾರ್ವಜನಿಕರಿಂದ ರಕ್ತ ಸಂಗ್ರಹಿಸಲಾಯಿತು. 135 ಮಂದಿ ನೇತ್ರದಾನಕ್ಕೆ ಸಮ್ಮತಿ ನೀಡಿದರು.  ಮರಣಾನಂತರ ವೈದ್ಯಕೀಯ ಬೋಧನಾ ಸಂಸ್ಥೆಗೆ ದೇಹದಾನಕ್ಕೆ ತಿಳಿಸಿದ ಸಾಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಮೋಹಿನಿ ಹಾಗೂ ನಿವೃತ್ತ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರಾಜಮ್ಮ ಮತ್ತು ನಾಗರಾಜನಾಯ್ಕರನ್ನು ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯ ಇಲಾಖಾಧಿಕಾರಿ ಸಂಘದ ಅಧ್ಯಕ್ಷ ಡಾ.ಹರ್ಷವರ್ಧನ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿನ್ನಪ್ಪ, ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಡಾ.ಗಂಗೂಬಾಯಿ, ಡಾ.ಅಶೋಕ್, ಚಂದ್ರಕಾಂತಮ್ಮ, ಪಾಂಡು,ಈಶ್ವರ್‌ನಾಯ್ಕ್, ರಮೇಶ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement