ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೇಶದ ಯೋಗ ಶಿಕ್ಷಣಕ್ಕೆ ವಿಶ್ವಖ್ಯಾತಿ

Vishwanath S
Updated On : 8 Jul 2014, 11:33 am

ಶಿವಮೊಗ್ಗ: ಭಾರತೀಯ ಸಂಸ್ಕೃತಿ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು. ಪತಂಜಲಿ ಮಹರ್ಷಿ ಯೋಗ ಮತ್ತು ಪ್ರಕೃತಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಹೊಸಮನೆಯ ಪತಂಜಲಿ ಯೋಗ ಕಲಾಮಂದಿರದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಅರಣ್ಯ ಇಲಾಖೆ, ಪತಂಜಲಿ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಒಂದು ತಿಂಗಳ ಕಾಲ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ಮತ್ತು ಪರಿಸರ ಮಿತ್ರ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಮೂಲದ ಯೋಗ ಶಿಕ್ಷಣಕ್ಕೆ ವಿಶ್ವದಲ್ಲಿ ಹೆಚ್ಚಿನ ಮಾನ್ಯತೆ ಇದೆ. ಪ್ರಕೃತಿಗೆ ಪೂರಕವಾದ ಗಿಡ ಮರಗಳಿಂದ ಶುದ್ಧವಾದ ವಾತಾವರಣ ಗಾಳಿ ಸಿಗುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರು ಮಾಡಬೇಕು ಎಂದ ಅವರು ಯೋಗ ಮತ್ತು ಪ್ರಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಎಂ.ಎನ್.ಸುಂದರರಾಜ್ ಮಾತನಾಡಿ, ಮುಂದಿನ ಯುವ ಪೀಳೆಗೆಗೆ ಪ್ರತಿಯೊಬ್ಬರು ಮರಗಿಡಗಳನ್ನು ನೆಟ್ಟು ಪೋಷಣೆ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಸಂಸ್ಥೆ ಗೌರವಾಧ್ಯಕ್ಷೆ ಪ್ರೇಮಾ ಶಿವಪ್ರಕಾಶ್ ಮಾತನಾಡಿ ಮರಗಿಡಗಳನ್ನು ಮಗುವಿನಂತೆ ಲಾಲನೆ ಪಾಲನೆಯನ್ನು ಮಾಡಿ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ:  ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಂಡಗದ್ದೆ ಹೆದ್ದೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಚ್.ಎಂ.ಕೇಶವಚತುರ, ಅರಸೀಕೆರೆ ಜೆ.ಸಿ.ಪುರದ ರಂಗಭೂಮಿ ಕಲಾವಿದ ಜೆ.ಆರ್.ಕಲ್ಲಪ್ಪಹೊಸಮನಿ, ಸಾಹಿತಿ ಎಚ್.ಬಿ.ಪಾರ್ವತಮ್ಮ ಹೊಸಮನಿ, ಹರಿಕಥಾ ಕಲಾವಿದ ಎಚ್.ಸಿ.ಹಾಲಪ್ಪಯ್ಯ ಶಾಸ್ತ್ರಿ, ಹೊಳೆನರಸೀಪುರ ತಾಲೂಕು ಕೆರಗೋಡಿನ ರಂಗಭೂಮಿ ಕಲಾವಿದ ಹೇಮರಾಜಚಂದ್ರ ಅವರಿಗೆ ಪರಿಸರ ಮಿತ್ರ ಪತಂಜಲಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಕೆ.ದೇವೇಂದ್ರಪ್ಪ, ಗಮಕ ಕಲಾವಿದ ಕೆ.ಜೆ.ಕೃಷ್ಣ ಅಯ್ಯಂಗಾರ್, ಉದ್ಯಮಿ ಕೆ.ಈ.ಕಾಂತೇಶ್, ಎ.ಎಚ್.ಶ್ಯಾಮಲಾ. ಆರ್.ಅವಿನಾಶ್, ರಂಗನಾಥ್, ಮಂಜುನಾಥ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸಿದ್ದರು. ಲಲಿತಮ್ಮ ಪ್ರಾರ್ಥಿಸಿದರು. ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಸ್ವಾಗತಿಸಿದರು. ಸಂಚಾಲಕಿ ಶೋಭಾ ದೇವರಾಜ್ ವಂದಿಸಿದರು. ಯೋಜನಾಧಿಕಾರಿ ಟಿ.ಸಿ.ವಿಜಯಭಾಸ್ಕರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement