ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗಣಕ ವಿಜ್ಞಾನ ವಿಭಾಗಕ್ಕೆ ಸೌಲಭ್ಯ ಕೊಡಿ

Mainashree
Updated On : 10 Jul 2014, 9:42 am

ಶಿವಮೊಗ್ಗ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಣಕ ವಿಜ್ಞಾನ ವಿಭಾಗಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗಕ್ಕೆ ಅವಶ್ಯವಿರುವ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ಸೊರಗುತ್ತಿದೆ. ವಿಭಾಗದಲ್ಲಿ ಎರಡು ಪ್ರಯೋಗಾಲಯಗಳಿದ್ದು, ಒಂದು ಪ್ರಯೋಗಾಲಯಕ್ಕೆ ಮಾತ್ರ ಯುಪಿಎಸ್ ಸೌಲಭ್ಯವಿದೆ. ಇನ್ನೊಂದು ಪ್ರಯೋಗಾಲ ವಿದ್ಯುತ್ತನ್ನೇ ಅವಲಂಭಿಸಿದ್ದು, ಪ್ರಯೋಗಾಲಯ ತರಗತಿಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಗಣಕ ವಿಜ್ಞಾನ ವಿಭಾಗದಲ್ಲಿ ಒಂದು ಪ್ರಯೋಗಾಲಯಕ್ಕೆ ಮಾತ್ರ ಅಗತ್ಯವಿರುವ ಗಣಕ ಯಂತ್ರಗಳಿದ್ದು, ಇನ್ನೊಂದು ಪ್ರಯೋಗಾಲಯಕ್ಕೆ ಅತ್ಯಗತ್ಯವಿರುವ ಕನಿಷ್ಠ ಗಣಕ ಯಂತ್ರಗಳು ಇಲ್ಲ. ಗಣಕ ವಿಜ್ಞಾನ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಟೆಂಡರ್ ಮೇ ತಿಂಗಳಲ್ಲಿ ನಿಧನ ಹೊಂದಿದ್ದು, ನಂತರ ಯಾರನ್ನೂ ನೇಮಕ ಮಾಡಿಕೊಂಡಿಲ್ಲ. ಅದೇ ರೀತಿ ಗಣಕ ವಿಜ್ಞಾನ ವಿಭಾಗದಲ್ಲಿ ಒಟ್ಟು 8 ಉಪನ್ಯಾಸಕರು (2 ಖಾಯಂ ಮತ್ತು 6 ಅತಿಥಿ) ಕಾರ್ಯನಿರ್ವಹಿಸುವುದರಿಂದ ಉಪನ್ಯಾಸಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲ.
ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ನೀಡುವ ಸಂದರ್ಭದಲ್ಲಿ ಎಂ. ಪ್ರವೀಣ್‌ಕುಮಾರ್, ಗಿರೀಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement