ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಹೊಸನಗರ: ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಭವಾನಿ (22) ಎಂಬಾಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಗರ ಸಮೀಪದ ತುಮಕೋಡು ಬ್ಯಾಣ ಎಂಬಲ್ಲಿ ನಡೆದಿದೆ. ಶಿರಸಿ ತಾಲೂಕು ಬನವಾಸಿ ಸಮೀಪದ ಮಡುವಳ್ಳಿಯ ಗಣಪತಿ ಆಚಾರ್ ಎಂಬವರ ಪುತ್ರಿಯಾದ ಭವಾನಿ ಅವರನ್ನು ತುಮಕೋಡು ಬ್ಯಾಣದ ವಾಸು ಎಂಬವರೊಂದಿಗೆ ವಿವಾಹ ನೆರವೇರಿಸಲಾಗಿತ್ತು. 3 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಅವರನ್ನು ಮನೆಯವರೆಲ್ಲಾ ಹುಡುಕಾಡಿದ್ದರು. ಆದರೆ, ಸುಳಿವು ಮಾತ್ರ ಸಿಕ್ಕಿರಲಿಲ್ಲ. ನಗರ ಠಾಣೆ ಪಿಎಸ್ಐ ದೂರು ದಾಖಲಿಸಿದ್ದಾರೆ.