ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಕ್ಕುಪತ್ರ ವಿತರಿಸಲು ಡಿಸಿಗೆ ಮನವಿ

Lingaraj Badiger
Updated On : 16 Jul 2014, 11:33 am

ಶಿಕಾರಿಪುರ: ಸಾಗುವಳಿದಾರ ಪರಿಶಿಷ್ಟ ಪಂಗಡದ ರೈತರು ಸಾಮಾಜಿಕ ಕಾರ್ಯಕರ್ತ ಉಮೇಶ್ ಮಾರವಳ್ಳಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ಪರಿಶಿಷ್ಟ ಪಂಗಡ ಹಾಗೂ ಇತರೆ ಸಾಗುವಳಿದಾರರು ವಂಶಪಾರಂಪರ್ಯವಾಗಿ ಅರಣ್ಯಭೂಮಿಯಲ್ಲಿ ದಶಕದಿಂದ ಸಾಗುವಳಿಯಲ್ಲಿ ನಿರತರಾಗಿದ್ದು, ಈ ಬಗ್ಗೆ ಈಗಾಗಲೇ ಹಲವು ಬಾರಿ ಸರ್ಕಾರದ ಆದೇಶದ ಮೇರೆಗೆ ಫಾರಂ ನಂ.50 ಹಾಗೂ 53 ಅರ್ಜಿ  ಗ್ರಾಮ ಸಮಿತಿಗೆ ಸಲ್ಲಿಸಲಾಗಿದೆ ಎಂದು ಉಮೇಶ್ ಜಿಲ್ಲಾಧಿಕಾರಿಗೆ ತಿಳಿಸಿದರು.
ಹಲವು ಬಾರಿ ಅರ್ಜಿ ಸಲ್ಲಿಸಿದರೂ ಇಂದಿಗೂ ಹಕ್ಕುಪತ್ರ ಸಾಗುವಳಿ ಚೀಟಿ ನೀಡದೆ ಇದೀಗ ಮತ್ತೆ ಅರ್ಜಿ ಆಹ್ವಾನಿಸಿ ಪಡೆಯಲಾಗಿದೆ. ಹೊಸ ಅರ್ಜಿಯ ಜತೆಗೆ ಲಗತ್ತಿಸಲಾದ ಹಳೆಯ ಅರ್ಜಿಯನ್ನು ಪುನರ್ ಪರಿಶೀಲಿಸಿ ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಅಧಿಕಾರಿಗಳು, ಗ್ರಾಮ ಮಟ್ಟದ ಅರಣ್ಯ ಸಮಿತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ಗ್ರಾ.ಪಂ ವಾರು ಸ್ಥಳ ತನಿಖೆ ನಡೆಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅರಣ್ಯ ವಾಸಿಗಳ ಹಕ್ಕು ಕಾಯ್ದೆ ಅಡಿಯಲ್ಲಿ ವಿಶೇಷವಾಗಿ ಪರಿಶಿಷ್ಟ ಪಂಗಡದವರಿಗೆ ಪ್ರಥಮ ಆದ್ಯತೆ ನೀಡಿ ಅರಣ್ಯ ಹಕ್ಕು ಪತ್ರ ಮತ್ತು ಸಾಗುವಳಿ ಚೀಟಿ ವಿತರಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಈಗಾಗಲೇ ಬಗರ್‌ಹುಕುಂ ಸಮಿತಿ ರಚಿಸಲಾಗಿದ್ದು ಶೀಘ್ರದಲ್ಲಿಯೇ ಗ್ರಾಮ ಮಟ್ಟದ ಅರಣ್ಯ ಸಮಿತಿ ರಚಿಸಿ ಅರಣ್ಯ ಇಲಾಖೆ,ಕಂದಾಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ,ತನಿಖೆ ನಡೆಸಿ ದಾಖಲೆಗಳ ಪರಿಶೀಲಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪರಿಶಿಷ್ಟ ಸಾಗುವಳಿದಾರ ರೈತ ಚಂದ್ರಪ್ಪ, ಚೌಡಪ್ಪ, ರಮೇಶ್, ಜಯಮ್ಮ, ಆನಂದ್, ಭರಮಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement