ಕರ್ತವ್ಯ ಪಾಲಿಸಲು ಸಹಕಾರ ಅಗತ್ಯ
ಸೊರಬ: ಇಲಾಖೆಯಲ್ಲಿ ಕೆಲಸ ಮಾಡುವಾಗ ನಿಗದಿತ ಸಮಯದ ಕೊರತೆಯಿಂದ ಕೆಲಸದಲ್ಲಿ ಕೊಂಚ ಏರುಪೇರಾಗುವುದು ಸಹಜ. ಆದ್ದರಿಂದ ವಿನಾಕಾರಣ ಇಲಾಖಾ ನೌಕರರನ್ನು ದೂರಬೇಡಿ. ನಿಮ್ಮಂತೆಯೇ ಅವರೂ ಕೂಡ ಮಾನವರು ಎಂಬುದನ್ನು ಮರೆಯಬೇಡಿ ಎಂದು ಶಿಕಾರಿಪುರ ಡಿವೈಎಸ್ಪಿ ಶೃತಿ ತಿಳಿಸಿದರು. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ರಂಜಾನ್ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸರು ಸರಿಯಾಗಿ ಕರ್ತವ್ಯ ಪಾಲನೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ. ಅಧಿಕಾರಿಗಳ ಮೇಲೆ ಒತ್ತಡ ತರಬೇಡಿ. ಅಮಾಯಕರ ವಿರುದ್ಧ ಅನವಶ್ಯಕ ಪ್ರಕರಣ ದಾಖಲಿಸಿ ಅಲೆದಾಡಿಸಬೇಡಿ ಎಂದರು. ವೃತ್ತ ನೀರಿಕ್ಷಕ ನಾಗರಾಜ ಮಾತನಾಡಿದರು. ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿ, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಸದಸ್ಯ ಕಲಂದರ್ ಸಾಬ್, ಅಜೀಂ ಸಾಬ್, ಚೌಟಿ ಚಂದ್ರಶೇಖರ್ ಪಾಟೀಲ್, ಶಬ್ಬೀರ್ ಸಾಬ್, ಪಿ.ಎಸ್. ಮಂಜುನಾಥ, ಕಾರಳ್ಳಿ ರಂಗಪ್ಪ, ನಾಗರಾಜ್ ಡಿಎಸ್ ಮೊದಲಾದರು ಇದ್ದರು.