ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜ್ಞಾನಿಗಳ ಸೇವೆಯಿಂದ ಭಗವಂತನ ಅನುಗ್ರಹ: ಗುರುಪ್ರಸಾಧಾಚಾರ್

Rashmi Kasaragodu
Updated On : 17 Jul 2014, 10:57 am


ಶಿಕಾರಿಪುರ: ಜ್ಞಾನಿಗಳ ಸೇವೆಯಿಂದ ಭಗವಂತನ ಅನುಗ್ರಹ ಸರ್ವರಿಗೂ ಪ್ರಾಪ್ತವಾಗಲಿದೆ ಎಂದು ಮೈಸೂರು ಮಧ್ವಶಾಸ್ತ್ರ ಸಂಪನ್ನ, ವಿದ್ವಾಂಸ ಗುರುಪ್ರಸಾದಾಚಾರ್ ತಿಳಿಸಿದರು.
ಜಯತೀರ್ಥರ ಆರಾಧನೆ ಅಂಗವಾಗಿ ಬುಧವಾರ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಪರಮಾತ್ಮನ ಅನಿಗ್ರಹ: ಹರಿಸರ್ವೋತ್ತಮತ್ವ, ಪಂಚಭೇದತ್ವ ಮತ್ತು ಮಧ್ವಾಚಾರ್ಯರ ದ್ವೈತ ಭಾಷ್ಯದ ಗ್ರಂಥಗಳನ್ನು ಸರಳೀಕರಿಸಿ ವ್ಯಾಖ್ಯಾನಿಸಿದ ಜಯತೀರ್ಥರು ಮಹಾಜ್ಞಾನಿಗಳಾದ ಗುರುಗಳ ಸೇವೆಯಿಂದ ಮಾತ್ರ ಪರಮಾತ್ಮನ ಅನುಗ್ರಹವಾಗಲಿದೆ ಎಂದು ತಿಳಿಸಿದ್ದು, ಪ್ರತಿಯೊಬ್ಬರಲ್ಲಿ ಸುಪ್ತವಾಗಿರುವ ಮೋಕ್ಷ ಪಡೆಯಲು ಜ್ಞಾನಿಗಳ ಸೇವೆ ಕೈಗೊಳ್ಳಲು ತಿಳಿಸಿದರು.
ಜಯತೀರ್ಥರ ಆರಾಧನೆ ಅಂಗವಾಗಿ ಸತತ 3 ದಿನ ಮಠದಲ್ಲಿ ಸಂಜೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಬೆಳಗ್ಗೆ ಸ್ತೋತ್ರ ಪಾರಾಯಣ, ಹುಚ್ಚೂರಾಯಸ್ವಾಮಿ ದೇವಾಲಯದವರೆಗೆ ಜಯತೀರ್ಥರ ಪಲ್ಲಕ್ಕಿ ಉತ್ಸವ ನೆರವೇರಿತು.
ತಾಲೂಕು ಮಧ್ವ ಸೇವಾ ಸಂಘದ ಅಧ್ಯಕ್ಷ ಬಾಟ್ನಿ ವಾದಿರಾಜರಾವ್, ಕಾರ್ಯದರ್ಶಿ ರಂಗನಾಥ, ಹಿರಿಯರಾದ ಪಾಂಡುರಂಗಿ ರಾಘವೇಂದ್ರಾಚಾರ್, ಗುರುರಾಘವೇಂದ್ರ ರಾವ್, ಹಚ್ಚೊಳ್ಳಿ ಭೀಮಸೇನ, ಸುಕುಮಾರ,ನಾಗರಾಜರಾವ್, ಸಮನ ಬಜನಾ ಮಂಡಳಿ ಅಧ್ಯಕ್ಷೆ ಶಾಂತಮ್ಮ, ಸುಶೀಲಮ್ಮ, ವಸಂತಿ, ನಳಿನಾ, ಗೀತಾ, ನಾಗರತ್ನಮ್ಮ, ಮಠದ ಪ್ರಧಾನ ಅರ್ಚಕ ರಾಘವೇಂದ್ರಾಚಾರ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement