ಭೂಸೇನಾ ನೇಮಕ ರ್ಯಾಲಿ
ಚಿಕ್ಕಮಗಳೂರು: ಭಾರತೀಯ ಭೂಸೇನೆ ವತಿಯಿಂದ ಸಿಪಾಯಿ ಕ್ಲರಿಕಲ್, ಟೆಕ್ನಿಕಲ್, ಡಿಎಸ್ಸಿ ಹುದ್ದೆಗಳ ನೇಮಕಾತಿ ಭರ್ತಿ ರ್ಯಾಲಿ ಆಗಸ್ಟ್ 5 ರಿಂದ 12 ರವರೆಗೆ ಮೂಡಬಿದರೆಯ ಆಳ್ವಾಸ್ ಎಜುಕೇಷನ್ ಪೌಂಡೇಷನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ಅವಿವಾಹಿತ ಯುವಕರು ರ್ಯಾಲಿಯಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ರ್ಯಾಲಿಯಲ್ಲಿ ಒಂದು ದಿವಸ ಮುಂಚಿತವಾಗಿ ತಮ್ಮ ದಾಖಲೆಯನ್ನು ಮಿಲಿಟರಿ ಅಧಿಕಾರಿಗಳಿಗೆ ತೋರಿಸಿ ಟೋಕನ್ ಪಡೆಯುವಂತೆ ಸೂಚಿಸಿದೆ. ಯುವಕರು ರ್ಯಾಲಿಯ ಸದುಪಯೋಗ ಪಡೆಯುವಂತೆ ಕೋರಲಾಗಿದೆ. ಮಾಹಿತಿಗಾಗಿ ಎ.ಆರ್.ಒ., ಕೂಳೂರು ಪೋಸ್ಟ್, ಮಂಗಳೂರು ಅಥವಾ ಸೈನಿಕ ಕಲ್ಯಾಣ ಮತ್ತು ಪುನರ್ವವತಿ ಇಲಾಖೆ, ಹಾಸನ ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.