ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರಿ ಶಾಲೆಗೆ ಆಂಗ್ಲ ಮಾಧ್ಯಮದ ಗರಿ: ಅಶ್ವಿನ್ಕುಮಾರ್

Rashmi Kasaragodu
Updated On : 17 Jul 2014, 10:47 am

ಹೊಸನಗರ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದ ತಮ್ಮ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯಲು ಮಾನ್ಯತೆ ನೀಡುವುದಾಗಿ ಜಿಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನ್ಕುಮಾರ್ ತಿಳಿಸಿದರು.
ಮಂಗಳವಾರ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಚಿತ್ತ ಶಾಲೆಯತ್ತ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣ ಹೃದಯ ಭಾಗದಲ್ಲಿರುವ ಈ ಸರ್ಕಾರಿ ಶಾಲೆಯಲ್ಲಿ ಉನ್ನತ ಮಟ್ಟದ ಖಾಸಗಿ ಶಾಲೆಯಲ್ಲಿರುವ ಶಿಕ್ಷಣದ ಗುಣಮಟ್ಟ ಹಾಗೂ ಸೌಲಭ್ಯ ಇದೆ. ಆದರೆ ಆಂಗ್ಲ ಮಾಧ್ಯಮ ಇಲ್ಲ ಎಂಬ ಕೊರತೆ ಸಹ ಸದ್ಯದಲ್ಲಿ ಈಡೇರಲಿದೆ ಎಂದು ಪೋಷಕರಿಗೆ ತಿಳಿಸಿದರು.ಪಪಂ ಅಧ್ಯಕ್ಷ ಎಚ್.ಎನ್. ಶ್ರೀಪತಿರಾವ್ ಮಾತನಾಡಿ, ಪೋಷಕರ ಬೇಡಿಕೆಯಂತೆ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯವನ್ನು ಪಪಂನಿಂದ ನಿರ್ಮಿಸುವುದಾಗಿ ಭರವಸೆ ನೀಡಿದರು. ವಾರ್ಡ್ ಸದಸ್ಯ ಡಿ.ಎಂ. ರತ್ನಾಕರ ಶೆಟ್ಟಿ ಮಾತನಾಡಿದರು.  ಪೋಷಕರಿಗಾಗಿ ವಿಶೇಷ ಮನರಂಜನೆ, ಕ್ರೀಡಾ ಸ್ಪರ್ಧೆಗಳನ್ನು ಹಾಗೂ ಲಕ್ಕಿ ಡಿಪ್ ಏರ್ಪಡಿಸಲಾಗಿತ್ತು. ಮುಖ್ಯ ಶಿಕ್ಷಕ ಗುರುಮೂರ್ತಿ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು. ರಾಜು ಬಿ. ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement