ಕೇಂದ್ರ ಬಜೆಟ್ ರೈತ ವಿರೋಧಿ: ಮಾನ್ಪಡೆ ಟೀಕೆ
ಶಿವಮೊಗ್ಗ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸಿದ ಬಜೆಟ್ ರೈತ ವಿರೋಧಿಯಾಗಿದ್ದು, ಕಾರ್ಪೋರೇಟರ್ ನಿಲವು ಸ್ಪಷ್ಟಪಡಿಸಿದೆ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಯೋಜನೆಗೆ ನೀಡಿರುವ ಅನುದಾನ ಬದಲಾಗಿಲ್ಲ. ಜನ ಸಾಮಾನ್ಯರಿಗೆ ಹೊರೆಯಾಗುವ ಪರೋಕ್ಷ ತೆರಿಗೆಗಳಲ್ಲಿನ ಏರಿಕೆ ರು. 7525 ಕೋಟಿ ಯಷ್ಟಾದರೂ ನೇರ ತೆರಿಗೆಯ ಕಡಿತದಿಂದ ಸರ್ಕಾರಕ್ಕೆ ರು. 22,200 ಕೋಟಿ ನಷ್ಟ ಉಂಟಾಗುತ್ತದೆ ಎಂದರು. ಕೃಷಿ ಉತ್ಪನ್ನಗಳ ರಾಷ್ಟ್ರೀಯ ಮಾರುಕಟ್ಟೆ ಕಲ್ಪನೆ ಸಹ ರಾಜ್ಯ ಸರ್ಕಾರಗಳ ಸಂಯುಕ್ತ ರಾಷ್ಟ್ರದ ಹಕ್ಕುಗಳ ಉಲ್ಲಂಘನೆಯಾಗಿದೆ. ಕೇಂದ್ರೀಕರಣದತ್ತ ಸಾಗುವ ಹೆಜ್ಜೆಯಾಗಿದೆ ಎಂದು ಆರೋಪಿಸಿದರು.